Tel: 7676775624 | Mail: info@yellowandred.in

Language: EN KAN

    Follow us :


ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು

Posted Date: 20 Aug, 2019

ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು

ಚನ್ನಪಟ್ಟಣ: ಹಿಂದುಳಿದ ವರ್ಗಗಳ ಆಶಾಕಿರಣ, ಬಡವರ ಬಂಧು, ಬಡವರ ಪರವಾದ ಹಲವು ಇಲಾಖೆಗಳನ್ನು ಹುಟ್ಟು ಹಾಕಿ ಭದ್ರ ಬುನಾದಿ ಹಾಕಿದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಸಹ ದು:ಖಾಂತ್ಯದಲ್ಲಿ ಮರಣ ಹೊಂದಿದ, ಸುದೀರ್ಘ ಕಾಲ ಮುಖ್ಯಮಂತ್ರಿ ಯಾಗಿ ನ್ಯಾಯಪರ ಅಧಿಕಾರ ನಡೆಸಿದ ಬಲಿಷ್ಠ ಹಿಂದುಳಿದ ನಾಯಕ ಎಂದರೆ ಅದು ಡಿ ದೇವರಾಜ ಅರಸು ಮಾತ್ರ ಎಂದು ಉಪನ್ಯಾಸಕ ಡಾ ಅಣ್ಣಯ್ಯ ತೈಲೂರು ಬಣ್ಣಿಸಿದರು.


ಅವರು ಇಂದು ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ೧೦೪ ನೇ ಜನ್ಮ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ಹಿಂದುಳಿದ ನಾಯಕರಾಗಿ ಗುರುತಿಸಿಕೊಂಡಿದ್ದರೂ ಸಹ ಅವರೆಂದೂ ಜಾತಿ ರಾಜಕಾರಣ ಮಾಡಿದವರಲ್ಲ, ಎಲ್ಲಾ ಜಾತಿಯ ಜನರನ್ನು ಅತ್ಯಂತ ಪ್ರೀತಿಯಿಂದ ಕಂಡು, ಅವರ ಎಲ್ಲಾ ಆಗು ಹೋಗುಗಳನ್ನು ಸಮರ್ಥವಾಗಿ ನಿರ್ವಹಿಸಿದ ನಾಯಕ, ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಸುದೀರ್ಘ ಅಂದರೆ ಎಂಟು ವರ್ಷಗಳ ಕಾಲ ನಿರಂತರವಾಗಿ ಮುಖ್ಯಮಂತ್ರಿ ಆಗಿದ್ದು, ಅವರು ಮರಣ ಹೊಂದಿದಾಗಿ ಲಕ್ಷಾಂತರ ಮಂದಿ ಅಶ್ರುತರ್ಪಣ ಗೊಂಡಿದ್ದು ಅವರ ಜಾತ್ಯಾತೀತ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದರು.


ಚನ್ನಪಟ್ಟಣದಲ್ಲಿ ನಡೆದ ಕಾಳಿದಾಸ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಜನತಾ ಪಕ್ಷದ ನಾಯಕ ಶಿವರಾಮಯ್ಯ ನವರು ಕಪ್ಪು ಬಾವುಟ ಪ್ರದರ್ಶಿಸಿದ ಸಂದರ್ಭದಲ್ಲಿ ನಾನು ರಾಜಕೀಯ ಮಾಡಲು ಬಂದಿಲ್ಲ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದು, ಮದ್ದೂರಿನಲ್ಲಿ ನಡೆದ ಬೃಹತ್ ಸಭೆಯಲ್ಲಿ ಕತ್ತಿ‌ ನೀಡಿದ ಕಾರ್ಯಕರ್ತರ ಜೊತೆ ನೀವು ನೀಡಿದ ಕತ್ತಿಯಿಂದ ದ್ವೇಷ ಅಸೂಯೆ ಮತ್ತು ಬಡತನ ವನ್ನು ಕೊಚ್ಚಿ ಹಾಕುತ್ತೇನೆಂದಿದ್ದು ಅವರ ಬಡವರ ಕಾಳಜಿಯನ್ನು ತೋರಿಸುತ್ತದೆ ಎಂದರು.


ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ ಭೂಸುಧಾರಣಾ ಕಾಯ್ದೆ ತಂದು ಬಡವರ ಪಾಲಿಗೆ ರಕ್ಷಾ ಕವಚವಾದರು, ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಇಂದಿರಾಗಾಂಧಿ ಯವರನ್ನು ಕರೆತಂದು ಚಿಕ್ಕಬಳ್ಳಾಪುರ ದಲ್ಲಿ ನಿಲ್ಲಿಸಿ ಗೆಲ್ಲಿಸಿ ಕಳುಹಿಸಿದ ಧೀಮಂತ ನಾಯಕ ದೇವರಾಜ ಅರಸು ರವರು, ಅವರ ರಾಜಕೀಯ ಆಪತ್ಕಾಲದಲ್ಲಿ‌ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಯವರು ಬೆಂಬಲ ನೀಡಿದ್ದರಿಂದಲೇ ಇಂದಿರಾಗಾಂಧಿ ಯವರ ಕೃಪಾ ಕಟಾಕ್ಷದಿಂದ ಇವರೂ ಸಹ ಮುಖ್ಯಮಂತ್ರಿ ಗಳಾದರು ಎಂದು ಬಣ್ಣಿಸಿದರು.


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶಿಲ್ದಾರ್ ಸುದರ್ಶನ್ ರವರು ಮಾತನಾಡಿ ಅರಸು ರವರು ಕೇವಲ ಮಾತನಾಡಿ ಸುಮ್ಮನಾದವರಲ್ಲ, ಆಡಿದ ಪ್ರತಿ ಮಾತುಗಳನ್ನು ಕೃತಿಯ ಮೂಲಕ ಹಾಗೂ ಕಾನೂನು ಮಾಡುವ ಮೂಲಕ ಮಾಡಿ ತೋರಿಸಿದ ಧೀಮಂತ ನಾಯಕರಾಗಿದ್ದರು ಎಂದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಎಂ ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಹಿಂದುಳಿದ ವರ್ಗಗಳ ಇಲಾಖೆಯ ಕುಮಾರ್ ಮತ್ತು ಎನ್ ಮೋಹನ್, ರೇಷ್ಮೆ ಇಲಾಖೆಯ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆಯ ಕಿರಣ್ ಕುಮಾರ್, ನಗರಸಭೆ ಯ ಅನೇಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಮತ್ತು ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑