Tel: 7676775624 | Mail: info@yellowandred.in

Language: EN KAN

    Follow us :


ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ

Posted Date: 24 Aug, 2019

ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ

ಚನ್ನಪಟ್ಟಣ: ಈ ವರ್ಷದ ನಾಲ್ಕು ಶ್ರಾವಣ ಮಾಸದ ಶನಿವಾರ ಗಳಲ್ಲಿ ಕಡೇ ಶ್ರಾವಣ ವಾದ ಇಂದು ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು.

ನೂರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ಭಕ್ತಿಭಾವದಿಂದ ನಿಂತು ದೇವರ ದರ್ಶನ ಪಡೆದು ಪುನೀತರಾದರು.


ಸುಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಯೇ ಪೂಜೆ ಪ್ರಾರಂಭಗೊಂಡಿದ್ದು ಇಂದು ಮಧ್ಯಾಹ್ನ ನದವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.


ಕೋಟೆ ಯಲ್ಲಿ ನೆಲೆಸಿರುವ ಶ್ರೀ ವರದರಾಜ ಸ್ವಾಮಿ, ಮಂಡಿಪೇಟೆ ಯಲ್ಲಿ ನೆಲೆಯಾಗಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ, ದೊಡ್ಡ ಮಳೂರು ಗ್ರಾಮದ ಶ್ರೀ ಅಂಬೆಗಾಲು ಕೃಷ್ಣ ದೇವಾಲಯ, ಈಶ್ವರ ದೇವಾಲಯ ಗಳು ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಗ್ರಹದ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮೀಣ ಭಾಗದ ಬಹುತೇಕ ದೇವಾಲಯಗಳಲ್ಲೂ ಸಹ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.


ಇದೇ ವೇಳೆ ತಾಲ್ಲೂಕು ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆಯ ವತಿಯಿಂದ ಭಕ್ತಾದಿಗಳಿಗೆ ತೊಂದರೆ ಆಗದಂತೆ ಸೂಕ್ತ ಮಾರ್ಗದರ್ಶನ ಮತ್ತು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೆಲವು ಭಕ್ತರು ಪ್ರಸಾದ ವಿನಿಯೋಗ ಮಾಡಿದರು.


ನಗರದ ಮಂಗಳವಾರಪೇಟೆ ಯ ಅನೇಕ ಕುಟುಂಬಗಳು ಕುಣಿಗಲ್ ತಾಲ್ಲೂಕಿನ ಬೆಣಚುಕಲ್ಲು ಗ್ರಾಮದ ಶ್ರೀ ಬೆಣಚುಕಲ್ಲು ತಿಮ್ಮಪ್ಪ ನ ವಕ್ಕಲಾಗಿದ್ದು ನೂರಾರು ಕುಟುಂಬಗಳು ಬೆಣಚುಕಲ್ಲು ತಿಮ್ಮಪ್ಪ ನ ದರ್ಶನ ಪಡೆದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑