Tel: 7676775624 | Mail: info@yellowandred.in

Language: EN KAN

    Follow us :


ಸ್ಪಂದಿಸದ ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ ಗುಡುಗು

Posted Date: 31 Aug, 2019

ಸ್ಪಂದಿಸದ ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ ಗುಡುಗು

ಚನ್ನಪಟ್ಟಣ: ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೂರು ರಾಜಣ್ಣಅವರ ಅಧ್ಯಕ್ಷತೆಯಲ್ಲಿ ಇಂದು ಕೆಡಿಪಿ ಸಭೆಯನ್ನು ಆಯೋಜಿಸಲಾಗಿತ್ತು. 

ಈ ಸಭೆಗೆ ಅರ್ಧಕ್ಕರ್ಧ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬೆರಳಣಿಕೆಯ ಪಿಡಿಓಗಳು ಭಾಗಿಯಾಗಿದ್ದರು. ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ತಡವಾಗಿ ಸಭೆ ಆರಂಭವಾದರೂ ಎಲ್ಲಾ ಅಧಿಕಾರಿಗಳು ಬಾರದಿದ್ದರಿಂದ ಅಧ್ಯಕ್ಷ ಹರೂರು ರಾಜಣ್ಣ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ರವರಿಗೆ ಸೂಚಿಸಿದರು.


ಸಭೆಗೆ ಅಧಿಕಾರಿಗಳು ಬಾರದಿದ್ದರೆ ಅಥವಾ ತಡವಾಗಿ ಬಂದರೆ ನೊಟೀಸ್ ನೀಡಿ ಕ್ರಮ ಕೈಗೊಳ್ಳ ಬೇಕಾಗುತ್ತೆ, ಎಂದು ಇಓ ರಾಮಕೃಷ್ಣ ಅವರು ಎಚ್ಚರಿಕೆಯನ್ನು ನೀಡಿದರು.


*ಕೆ ಆರ್ ಡಿ ಎಲ್ ಅಧಿಕಾರಿ ಮೇಲೆ ಕ್ರಮ*


ಕೆಆರ್‌ಡಿಎಲ್ ಅಧಿಕಾರಿಗಳು, ಯಾವ ಸಭೆಗೂ ಬರುವುದಿಲ್ಲ, ತಾಲ್ಲೂಕಿನಲ್ಲಿ ಕೋಟ್ಯಾಂತರ ರೂಪಾಯಿ ಕೆಲಸ ಮಾಡುತ್ತಾರೆ,  ಯಾವ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡುತ್ತಾರೋ, ಅದರ ತಾಲ್ಲೂಕು ಮಟ್ಟದ ಅಧಿಕಾರಿ ಗಳಿಗೂ ಗೊತ್ತಾಗದಂತೆ ಕೆಲಸ ಮಾಡುತ್ತಾರೆ, ಅವರ ಬಿಲ್ ತಡೆ ಹಿಡಿದು ನೊಟೀಸ್ ನೀಡಿ ಎಂದು ರಾಜಣ್ಣ ಹೇಳಿದರು.


*ಪಿಡಿಓ ಗಳಿಗೂ ನೋಟೀಸ್ ನೀಡಿ*


ಸಭೆಗೆ ಬಾರದ ಪಿಡಿಓಗಳ ವಿರುದ್ಧ ಹರಿಹಾಯ್ದ

ಅಧ್ಯಕ್ಷ ರಾಜಣ್ಣ ಇ.ಓಗೆ ಸೂಚನೆ ನೀಡಿ ಸಭೆಗೆ ಹಾಜರಾಗದ ಪಿಡಿಓಗಳ ಮೇಲೆ ಕ್ರಮಜರುಗಿಸಲು ಸೂಚಿಸಿದರು. ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ಸುಪರ್ದಿಗೆ ಬರುವ ಎಲ್ಲಾ ವ್ಯವಹಾರಿಕ ಅಂಗಡಿ ಮುಂಗಟ್ಟು ಗಳಿಗೆ ಪರವಾನಗಿ ನೀಡಿ ಕರ ವಸೂಲಿ ಮಾಡದೆ ಕಾಲ ಕಳೆಯುತ್ತಿದ್ದಾರೆ, ಅನುದಾನವೂ ಸಹ ಸರಿಯಾದ ಕ್ರಮದಲ್ಲಿ ಸದ್ಬಳಕೆ ಆಗುತ್ತಿಲ್ಲ ಎಂದು ಬೇಸರಿಸಿದರು.


*ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ಸೂಚನೆ*


ತಾಲ್ಲೂಕು ಅಧಿಕಾರಿಗಳು ತಾಲ್ಲೂಕು ಪಂಚಾಯತಿ ಅನುದಾನದ ಪಟ್ಟಿ ಮಾತ್ರ ಕೊಡದೆ, ನಿಮಗೆ ಯಾವ ಯಾವ ಮೂಲದಿಂದ ಅನುದಾನ ಬರುತ್ತದೆಯೋ ಎಲ್ಲಾ ಅನುದಾನಗಳ ಪಟ್ಟಿಯನ್ನು ಕನಿಷ್ಠ ಮೂರು ದಿನ ಮುಂಚಿತ ವಾಗಿ ನೀಡಿದರೇ ನಾವು ಪರಿಶೀಲಿಸಿ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.


*ರೈತರಿಗೆ ಸಕಾಲದಲ್ಲಿ ಯೂರಿಯಾ ದೊರೆಯುತ್ತಿಲ್ಲ*


ತಾಲ್ಲೂಕಿನ ರೈತರಿಗೆ ಯೂರಿಯಾ ಸರಿಯಾದ ಸಮಯಕ್ಕೆ ಯೂರಿಯಾ ದೊರೆಯುತ್ತಿಲ್ಲ, ಕಾಳ ಸಂತೆಯಲ್ಲಿ ಮಾರಲು ಶೇಖರಣೆ ಮಾಡುವವರೂ ಇದ್ದಾರೆ, ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೃಷಿ ಇಲಾಖೆ ಅಧಿಕಾರಿ ಅಪರ್ಣಾ ರವರಿಗೆ ಕೇಳಿದ ಪ್ರಶ್ನೆಗೆ ಅವರು ತಾಲ್ಲೂಕಿಗೆ ೪೦೦ ಟನ್ ಯೂರಿಯಾ ಬೇಕಾಗಿದೆ, ಸದ್ಯ ೬೮ ಟನ್ ಮಾತ್ರ ದಾಸ್ತಾನು ಇದೆ, ಕೃಷಿ ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ, ನಾಳೆಯೂ ಸಹ ದಾಸ್ತಾನು ಬರಲಿದೆ ಎಂದರು.ಆರೋಗ್ಯ ಇಲಾಖೆಯಿಂದ ಟ್ಯಾಂಕ್ ಶುದ್ಧೀಕರಣ ಮಾಡಿ, ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ, ಸೊಳ್ಳೆ ನಿಯಂತ್ರಣ ಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ದಕ್ಷಿಣಾ ಮೂರ್ತಿ ಹೇಳಿದರು.


*ಕೋಟ್ಯಾಂತರ ರೂಪಾಯಿ ನೀರಿನ ಬಿಲ್ ಬಾಕಿ*


ಬಹುತೇಕ ಎಲ್ಲಾ ಪಂಚಾಯತಿಗಳಲ್ಲಿಯೂ ಕೋಟಿ ರೂಪಾಯಿ ಮೀರಿದ ನೀರಿನ ಬಿಲ್ ಬಾಕಿ ಇದ್ದು ವಸೂಲಿ ಮಾಡುತ್ತಿಲ್ಲ, ಯಾಕೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಬಾರದ ಕಾರಣ, ಸಿಟ್ಟಾದ ಅಧ್ಯಕರು ಒಬ್ಬ ರೈತ ಅಥವಾ ಬಡ ಕಾರ್ಮಿಕ ನಿಗೆ ಹಲವಾರು ರೀತಿಯಲ್ಲಿ ಕರ ವಸೂಲಿ ಮಾಡುತ್ತೀರಿ, ದೊಡ್ಡ ದೊಡ್ಡ ಅಂಗಡಿ ಮುಂಗಟ್ಟುಗಳು, ರೇಷ್ಮೆ ನೂಲು ತಯಾರಿಕಾ ಘಟಕಗಳು ಹೆಚ್ಚಾಗಿವೆ, ಅದರಲ್ಲೂ ಹೊಂಗನೂರು ಗ್ರಾಮದಲ್ಲಿ ಹೆಚ್ಚಾಗಿದ್ದು ಯಾಕೆ ಪರವಾನಗಿ ನೀಡಿಲ್ಲ, ಕರ ವಸೂಲಿ ಮಾಡಿಲ್ಲ, ಶೀಘ್ರವಾಗಿ ಕರ ವಸೂಲಿ ಗೆ ಮುಂದಾಗಿ ಎಂದು ಪಿಡಿಓ ಗಳಿಗೆ ಸೂಚಿಸಿದರು.


*ಗಮನಕ್ಕೆ ಬಾರದೆ ಎನ್ ಆರ್ ಎಂ ಎಲ್ ಕೋಟ್ಯಾಂತರ ವಹಿವಾಟು*


ಎನ್ ಎಂ ಆರ್ ಎಲ್ ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಆನಂದ್ ರವರನ್ನು ತರಾಟೆಗೆ ತೆಗೆದುಕೊಂಡ ರಾಜಣ್ಣ ನವರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದು ಪಂಚಾಯತಿ ಯ ಗಮನಕ್ಕೆ ತರದೇ ಹಣ ಬಳಕೆ ಮಾಡಿದ್ದೀರಿ, ಇದರ ವಿರುದ್ಧ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ, ಮಂಗಳವಾರ ದೊಳಗೆ ನಾಲ್ಕು ವರ್ಷಗಳ ಸಂಪೂರ್ಣ ಮಾಹಿತಿಯನ್ನು ಒಪ್ಪಿಸಬೇಕೆಂದು ತಾಕೀತು ಮಾಡಿದರು.


ಪಶುಸಂಗೋಪನೆ, ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಾಜರಿದ್ದ ಅಧಿಕಾರಿ ಗಳ ಜೊತೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಸೂಚಿಸಿದರು.


ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಶ್, ಪಂಚಾಯತಿ ಕಾರ್ಯದರ್ಶಿ ಲೋಕೇಶ್ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑