Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೮:ಮೊರದ ಮೇಲೆ ಪಾದಗಳನ್ನು ಏಕೆ ಇಡಬಾರದು?

Posted Date: 04 Sep, 2019

ತಾಳೆಯೋಲೆ ೨೮:ಮೊರದ ಮೇಲೆ ಪಾದಗಳನ್ನು ಏಕೆ ಇಡಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಮೊರದ ಮೇಲೆ ಪಾದಗಳನ್ನು ಏಕೆ ಇಡಬಾರದು ?

ಸಾಂಪ್ರದಾಯಿಕವಾಗಿ ಮೊರವನ್ನು ಬಿದಿರಿನಲ್ಲಿ‌ ಮಾಡುತ್ತಾರೆ, ಈ ರೀತಿಯಾದ ಮೊರವನ್ನು ಧಾನ್ಯಗಳನ್ನು ಒಕ್ಕಣೆ ಮಾಡುವುದಕ್ಕಾಗಿ ಉಪಯೋಗಿಸುವರು.

ಧಾನ್ಯದಲ್ಲಿ ಇರುವ ಹೊಟ್ಟನ್ನು ಮಾಟುವುದರಿಂದ (ಕೇರುವುದರಿಂದ) ಅಡುಗೆಗೆ ಉಪಯೋಗಿಸುವ ಧಾನ್ಯ ಶುಭ್ರವಾಗುತ್ತದೆ. ಭಾರತೀಯರು ಧಾನ್ಯವನ್ನು ಬಹಳ ಪವಿತ್ರವೆಂದು ಭಾವಿಸುವರು. ಆದ್ದರಿಂದ ಮೊರವನ್ನು ಸಹ ಪವಿತ್ರವೆಂದೇ ಭಾವಿಸುವರು. ಸಾಂಪ್ರದಾಯದ ನಂಬಿಕೆ ಪ್ರಕಾರ ಮೊರದ ಮೇಲೆ ಕಾಲು ಇಡುವುದು ಪಾಪವೆಂದು ಭಾವಿಸುವರು. ಆದ್ದರಿಂದ ಈ ನಿಯಮವನ್ನು ಸಂಪ್ರದಾಯಸ್ಥರು ಇಂದಿಗೂ ತಪ್ಪದೇ ಪಾಲಿಸುತ್ತಾರೆ.


ಇದರಲ್ಲಿ ಎರಡು ಪ್ರಧಾನ ಅಂಶಗಳು ಅಡಗಿವೆ.

ಮೊದಲನೆಯದಾಗಿ ಮೊರವನ್ನು ಮಾಡಲು ಉಪಯೋಗಿಸುವ ಬಿದಿರು ಮೊನಚಾಗಿ ಇರುತ್ತದೆ, ಕಾಲಿಟ್ಟಾಗ ಚುಚ್ಚಿ ಗಾಯವಾಗುವ ಅವಕಾಶ ಹೆಚ್ಚಿರುತ್ತದೆ.

ಎರಡನೆಯದಾಗಿ ಶುಭ್ರತೆಗೆ ಸಂಬಂಧಿಸಿದ್ದು, ಪಾಪ ಭೀತಿಯಿಂದ ಮೊರದ ಮೇಲೆ ಕಾಲಿಡುವುದಕ್ಕೆ ಸಂದೇಹಿಸುತ್ತಾರೆ, ಆಗ ಮೊರ ಶುಭ್ರವಾಗಿರುವುದಲ್ಲದೆ ಮೊರದಲ್ಲಿ ಮಾಟುವ ಧಾನ್ಯವೂ ಸಹ ಮಲಿನವಾಗದೇ ಇರುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑