Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೦: ಮಾನವನ ಜೀವನ ದ ವಿಧಾನ ಹೇಗಿರಬೇಕು?

Posted Date: 05 Sep, 2019

ತಾಳೆಯೋಲೆ ೩೦: ಮಾನವನ ಜೀವನ ದ ವಿಧಾನ ಹೇಗಿರಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಮಾನವನ ಜೀವನದ ವಿಧಾನ ಹೇಗಿರಬೇಕು ?


ವಿಶ್ವವು ನಿರಂತರವಾಗಿ ಒಂದಾನೊಂದು ಕ್ರಮವನ್ನು ಅನುಸರಿಸಿ ಪರಿಭ್ರಮಿಸುತ್ತದೆ. ಈ ರೀತಿಯ ಚಲನೆಯಿಂದಲೇ ವಿಶ್ವವು ತನ್ನ ಧರ್ಮದಲ್ಲಿ ಸ್ಥಿತಿಯನ್ನು ಹೊಂದಿ *ದೈವಾಜ್ಞಕ್ಕೆ* ಅನುಗುಣವಾಗಿರುವುದು.


*ಸೂರ್ಯ ಚಂದ್ರ ಗ್ರಹ ನಕ್ಷತ್ರ*ಗಳಂತೆ ಮಾನವನ ಜೀವನ ವಿಧಾನವು ಸಹ ಲೋಕಕ್ಕೆ ಕ್ಷೇಮವನ್ನು ಉಂಟುಮಾಡುವ ಸತ್ಕರ್ಮಗಳಲ್ಲಿ ಮುಳುಗಿರಬೇಕು, ಮಾನವನ ಜೀವನದ ಲಕ್ಷ್ಯ ಸುಖಾನ್ವೇಷಣೆ ಅಲ್ಲ. ನಿಜವಾದ ಶಾಂತಿ ಮತ್ತು ಆನಂದವನ್ನು ಹೊಂದುವುದಕ್ಕೆ ಮಾನವರು ನಿರಂತರವಾಗಿ ಶುಭಕರ್ಮಗಳನ್ನು ಮಾಡುವುದಕ್ಕೆ ತಮ್ಮ ಅಮೂಲ್ಯವಾದ ಕಾಲವನ್ನು ಉಪಯೋಗಿಸಬೇಕು. *ಉಪಯೋಗಕ್ಕೆ ಬಾರದ ಮಾತು, ಕೆಲಸ ಮತ್ತು ಕೈಗಳನ್ನು ಬಿಟ್ಟು ಬಿಡಬೇಕು.*


ಯಾವಾಗ ಮನುಷ್ಯನು ಸದ್ಬುದ್ದಿಯಿಂದ ಕರ್ಮಗಳನ್ನು *ಮನಸಾ-ವಾಚಾ ಕರ್ಮಣ,* *ಶ್ರದ್ಧೆ ಮತ್ತು ಏಕ ಚಿತ್ತದಿಂದ* ಮಾಡುವರೋ ಅಂತವರಿಗೆ ಭಗವಂತನು ಅವರ ಜೀವನಕ್ಕೆ ಅವಶ್ಯಕವಾದ ಮತ್ತು ಬೇಕಾದಷ್ಟು ಫಲಗಳನ್ನು ನೀಡುತ್ತಾನೆ.


*ಸ್ವಾರ್ಥ, ಕಳ್ಳತನ ಮತ್ತು ಸುಳ್ಳು ಹೇಳುವಿಕೆಯಿಂದ ಮನುಷ್ಯನು ತನ್ನ ಪತನವನ್ನು ಹೊಂದುತ್ತಾನೆ.*

ವಿಶ್ವ ರಹಸ್ಯಗಳನ್ನು ತಮ್ಮ ಪ್ರತಿಭೆಯಿಂದ ದರ್ಶನ ಮಾಡಿದ ಋಷಿಗಳು ಶ್ರೇಷ್ಠವಾದ ಜೀವನ ವಿಧಾನವನ್ನು ತಮ್ಮ ಬೋಧನೆಗಳಿಂದ ಸುಗಮವಾಗಿ ಮಾಡಿರುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑