Tel: 7676775624 | Mail: info@yellowandred.in

Language: EN KAN

    Follow us :


ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted Date: 05 Sep, 2019

ಇಂದೂ ಬಂದ್, ಶಿಕ್ಷಕರ ದಿನಾಚರಣೆ ಮುಂದೂಡಿಕೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚನ್ನಪಟ್ಟಣ: ಮಾಜಿ ಸಚಿವ ಡಿ ಕೆ ಶಿವಕುಮಾರ್ ರವರನ್ನು ಇ ಡಿ ಇಲಾಖೆ ಬಂಧಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಪಕ್ಷವೂ ಒಂದು ದಿನದ ಬಂದ್ ಗೆ ಕರೆ ನೀಡಿತ್ತಾದರೂ ಸ್ಥಳೀಯ ಕಾರ್ಯಕರ್ತರು ಇಂದೂ ಸಹ ಬಂದ್ ಆಚರಿಸಿದರು.


ಬೆಂಗಳೂರು ಮೈಸೂರು ಹೆದ್ದಾರಿಯ ಮಂಗಳವಾರಪೇಟೆ ಯ ಸ್ಪನ್ ಸಿಲ್ಕ್ ಮಿಲ್ ನ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ತಡೆ ನಡೆಸಿ ಡಿ ಕೆ ಶಿವಕುಮಾರ್ ಪರ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಹೆದ್ದಾರಿಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟ ಕಾರ್ಯಕರ್ತರು ಬಸ್ ನಿಲ್ದಾಣ, ಸಾತನೂರು ವೃತ್ತ, ಷೇರು ಹೋಟೆಲ್, ಡೂಂ ಲೈಟ್ ವೃತ್ತ ಮಂಡಿಪೇಟೆ, ಡಿ ಟಿ ರಾಮು ವೃತ್ತ ದ‌ ಮೂಲಕ ಗಾಂಧಿ ಭವನದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು.


ನಗರದ ಎಂ ಜಿ ರಸ್ತೆ, ಜೆ ಸಿ ರಸ್ತೆ ಹಾಗೂ ಹೆದ್ದಾರಿ ಸೇರಿದಂತೆ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು, ಹೆದ್ದಾರಿಯಲ್ಲಿಯೂ ಸಹ ವಾಹನಗಳ ಓಡಾಟ ಬಹುತೇಕ ಕಡಿಮೆಯಾಗಿತ್ತು.


ನಿನ್ನೆ ದಿನವೇ ನಾಳೆಯೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರಿಂದ ಜಿಲ್ಲಾಧಿಕಾರಿ ಅರ್ಚನಾ ರವರು ಇಂದು ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು.


ಸೆಪ್ಟೆಂಬರ್ ೦೫ ರಾಧಾಕೃಷ್ಣನ್ ರವರ ಜಯಂತಿ ಪ್ರಯುಕ್ತ ಶಿಕ್ಷಕರ ದಿನಾಚರಣೆಯಿದ್ದು ಶಾಲೆಗಳಿಗೆ ರಜೆ ಇದ್ದುದರಿಂದ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ದ ಅನುಮತಿ ಪಡೆದು ದಿನಾಚರಣೆಯನ್ನು ಮುಂದೂಡಲಾಗಿದೆ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಸೀತಾರಾಮು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑