Tel: 7676775624 | Mail: info@yellowandred.in

Language: EN KAN

    Follow us :


ನೇತ್ರದಾನ ದ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಡಾ ಅಶೋಕ್ ವೆಂಕೋಬರಾವ್

Posted Date: 07 Sep, 2019

ನೇತ್ರದಾನ ದ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಡಾ ಅಶೋಕ್ ವೆಂಕೋಬರಾವ್

ಚನ್ನಪಟ್ಟಣ: ಬದುಕಿದ್ದಾಗಲೇ ಹೆಸರು ನೋಂದಾಯಿಸಿ ಮರಣಾನಂತರ ತಮ್ಮ ಕಣ್ಣುಗಳನ್ನು ಮಣ್ಣು ಮಾಡುವ ಅಥವಾ ಸುಡುವ ಬದಲು ಅಂಧರಿಗೆ ನೀಡಿ ಅವರ ಬಾಳಿಗೆ ಬೆಳಕಾಗಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ಅಶೋಕ್ ವೆಂಕೋಬರಾವ್ ತಿಳಿಸಿದರು.

ಅವರು ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ೩೪ ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ನೇತ್ರದಾನವು ಮತ್ತಿತರ ಅಂಗಾಂಗ ದಾನಗಳಂತೆ ಬದುಕಿದ್ದಾಗಲೇ ಕೊಡುವುದಲ್ಲ, ಮರಣಾನಂತರ ದಾನ ಮಾಡುವುದರಿಂದ ನಿಮ್ಮ ಎರಡು ಕಣ್ಣುಗಳು ಇಬ್ಬರು ಅಂಧರ ಕಣ್ಣನ್ನು ತೆರೆಸುತ್ತವೆ, ಅದೇ ನಿಮ್ಮ ಕಣ್ಣುಗಳು ನೀವು ಸತ್ತ ನಂತರವೂ ಬೇರೆಯವರ ಮೂಲಕ ಸುಂದರ ಬದುಕನ್ನು ನೋಡಬಲ್ಲವು, ಮರಣಾನಂತರ ನೇತ್ರದಾನಕ್ಕಾಗಿ ಇಂದೇ ಹೆಸರನ್ನು ನೋಂದಾಯಿಸಿಕೊಂಡು ನಿಮ್ಮ ಕಣ್ಣುಗಳಿಗೆ ಶಾಶ್ವತ ಬೆಳಕು ನೀಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅಧಿಕಾರಿ ದೇವರಾಜು ಮಾತನಾಡಿ ನೇತ್ರದಾನ ಮಾಡುವುದು ಮರಣಾನಂತರ ಆದ್ದರಿಂದ ಯಾವುದೇ ತೊಂದರೆ ಇಲ್ಲ, ಕಣ್ಣು ತೆಗೆದ ನಂತರ ಶವ ದ ಮುಖದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ, ಒಬ್ಬ ಮೃತ ವ್ಯಕ್ತಿ ನೀಡಿದ ಕಣ್ಣು ಇಬ್ಬರಿಗೆ ಬೆಳಕಾಗುತ್ತದೆ, ನೀವು ಬಹುತೇಕ ಯಾವುದೇ ಖಾಯಿಲೆಗಳಿಂದ ಬಳಲುತ್ತಿದ್ದರೂ ಸಹ ಅದು ನೇತ್ರದಾನ ಕ್ಕೆ ಅಡ್ಡಿಯಾಗುವುದಿಲ್ಲ, ಹಾಗಾಗಿ ಬದುಕಿದ್ದಾಗಲೇ ನೇತ್ರದಾನ ಮಾಡುವ ಸಂಕಲ್ಪ ಮಾಡಿ ಎಂದರು.


ಕಾರ್ಯಕ್ರಮದಲ್ಲಿ ರೋಹಿತ್, ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಶಿಕ್ಷಕರಾದ ಜಯರಾಮು ಹಾಗೂ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑