Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೪: ಮೊಟ್ಟೆಗಳನ್ನು ಹೊಂದಿರುವ ಇರುವೆಗಳನ್ನು ನಾವು ಏಕೆ ಸಾಯಿಸಬಾರದು?

Posted Date: 11 Sep, 2019

ತಾಳೆಯೋಲೆ ೩೪: ಮೊಟ್ಟೆಗಳನ್ನು ಹೊಂದಿರುವ ಇರುವೆಗಳನ್ನು ನಾವು ಏಕೆ ಸಾಯಿಸಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಮೊಟ್ಟೆಗಳನ್ನು ಹೊಂದಿರುವ ಇರುವೆಗಳನ್ನು ನಾವು ಏಕೆ ಸಾಯಿಸಬಾರದು ?*


ಸಾಂಪ್ರದಾಯಿಕವಾದ ವಿದ್ಯಾ ವಿಧಾನವು ಬಹಳ ಬದಲಾವಣೆಯಾಗಿದೆ. ಆದರೂ ಸಹ ನಮ್ಮ ಪೂರ್ವಿಕರು ನೀಡಿರುವ ಮೌಲ್ಯಗಳನ್ನು ನಾವು ಮರೆತಿಲ್ಲ. ಇಂದಿಗೂ ಅನೇಕ ಭಾರತೀಯರು ಸಾಂಪ್ರದಾಯಿಕ ಮೌಲ್ಯಗಳನ್ನು ರಕ್ಷಿಸುತ್ತಾ ಜೀವನ ಮಾಡುತ್ತಿದ್ದಾರೆ.


ಮೊಟ್ಟೆಗಳನ್ನು ಹೊಂದಿರವ ಇರುವೆಗಳನ್ನು ಸಾಯಿಸುವುದು ನಮ್ಮ ಹಿರಿಯರಿಂದ ನಿಷೇಧಿಸಲ್ಪಟ್ಟಿದೆ.ಹೀಗೆ ಉದ್ದೇಶ ಪೂರ್ವಕವಾಗಿ ಮಾಡುವುದು ಪಾಪ ಕರ್ಮವೆಂದು ಹೇಳಲ್ಪಟ್ಟಿದೆ. ಈ ನಿಷೇಧವು ನಮಗೆ ನೀತಿಯನ್ನು ಬೋಧಿಸುತ್ತದೆ. ಪ್ರಕೃತಿಯಲ್ಲಿ ಅನೇಕ ಜೀವರಾಶಿಗಳೊಂದಿಗೆ ಜೀವಿಸುವ ನಾವು ಅವುಗಳನ್ನು ಪ್ರೀತಿಸಿ ತಕ್ಕುದಾದ ನ್ಯಾಯವನ್ನು ಮಾಡಬೇಕೆಂದು ಚಿಕ್ಕಂದಿನಲ್ಲೇ ಕಲಿತುಕೊಳ್ಳುವೆವು.


ಮಾನವರಾದ ನಾವು ಇತರೆ ಪ್ರಾಣಿಗಳ ಕಷ್ಟ ಸುಖಗಳ ಬಗ್ಗೆ ಯೋಚಿಸುವೆವು. ಮೊಟ್ಟೆಗಳನ್ನು ಹೊಂದಿದ ಇರುವೆಗಳು ತಮ್ಮಲ್ಲಿನ ಪ್ರೇಮವನ್ನು ಜಾಗೃತಗೊಳಿಸುತ್ತವೆ. ಇರುವೆ ಒಂದು ಪ್ರಾಣಿ, ಅದರ ಹೊಟ್ಟೆಯಲ್ಲಿ ಇನ್ನೊಂದು ಪ್ರಾಣ ಅಡಗಿದೆಯೆಂಬ ಜ್ಞಾನವೇ ಅವುಗಳಿಗೆ ಹಾನಿ ಮಾಡಬಾರದೆಂಬುದೇ ಸೂಕ್ತಿ, ಪಾಪಕರ್ಮ ಎನ್ನುವ ಭಾವವೇ ನಮ್ಮನ್ನು ಕೆಟ್ಟದ್ದನ್ನು ಮಾಡದಂತೆ ತಡೆಯುತ್ತದೆ.


*ಸಂಗ್ರಹ ಮತ್ತು ಪ್ರಚಾರ:*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑