Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೧: *ಗಂಡು ಮಕ್ಕಳಿಗೆ ತೇಜೋವಂತವಾದ ಹೆಸರನ್ನು ಇಡಬೇಕೆ?

Posted Date: 01 Oct, 2019

ತಾಳೆಯೋಲೆ ೫೧:  *ಗಂಡು ಮಕ್ಕಳಿಗೆ ತೇಜೋವಂತವಾದ ಹೆಸರನ್ನು ಇಡಬೇಕೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಗಂಡು ಮಕ್ಕಳಿಗೆ ತೇಜೋವಂತವಾದ ಹೆಸರನ್ನು ಇಡಬೇಕೆ ?

ನಾಮಕರಣ ಉತ್ಸವವನ್ನು ಮಗುವಿಗೆ ನಡೆಸಬೇಕು ಎಂದು ಭಾರತೀಯ ಸಂಪ್ರದಾಯ ತಿಳಿಸುತ್ತದೆ. ಅತಿ ಚಿಕ್ಕ ಕೆಲಸಕ್ಕೂ ಸಹ ಬಹಳ ಪ್ರಾಧಾನ್ಯತೆ ಕೊಡುವುದು ನಮ್ಮ ಸಂಪ್ರದಾಯ.
ಮಗುವಿನ ನಾಮಕರಣವನ್ನು *೧೧ ಇಲ್ಲವೇ ೧೩ ನೇ ದಿನದಂದು ಆಚರಿಸುವರು. ಕೆಲವು ರಾಜ್ಯಗಳಲ್ಲಿ ೨೧ ಇಲ್ಲವೇ ೨೮ ನೇ ದಿನ ಈ ಕಾರ್ಯಕ್ರಮವನ್ನು ಮಾಡುವರು.* ಈ ದಿನ ತಮ್ಮ ಮಗು ಕ್ಷೇಮವಾಗಿ‌ ಇರಬೇಕೆಂದು ಜನ್ಮದಾತರು ಪ್ರಾರ್ಥನೆಯನ್ನು ಮಾಡುವರು.

ಈ ಕಾರ್ಯಕ್ರಮದಲ್ಲಿ ಮೊದಲು ತಾಯಿ ಮಗುವಿಗೆ ಸ್ನಾನ ಮಾಡಿಸಿ ಮಗುವನ್ನು ತಂದೆಯ ಕೈಯಲ್ಲಿ ಕೊಟ್ಟು ಆತನ ಬಲಭಾಗದಲ್ಲಿ ಕುಳಿತುಕೊಳ್ಳುವಳು. ಭಗವಂತನನ್ನು ಪ್ರಾರ್ಥಿಸುತ್ತಾ ತಂದೆಯು ತನ್ನ ಮಗುವಿಗೆ ಹೆಸರನ್ನು ಇಡುತ್ತಾನೆ. ಗಂಡು ಮಗುವಾದರೆ ತೇಜೋವಂತನಾದ ಮತ್ತು ಎದೆಗೆ ಒತ್ತುಕೊಳ್ಳುವಂತಹ ಹೆಸರನ್ನು ಇಡಬೇಕು. ಆ ಹೆಸರು *ಶಕ್ತಿ, ಕರುಣೆ ಮತ್ತು ಸೇವಾ ಭಾವನೆ*ಯನ್ನು ಸೂಚಿಸುವ ರೀತಿಯಲ್ಲಿ ಹೆಸರನ್ನು ಆರಿಸಿ ಇಡಬೇಕು. *ಅರ್ಥಗರ್ಭಿತವಾದ ಮತ್ತು ಕರೆಯಲು ಸುಲಭವಾಗಿ ಇರುವ ಹೆಸರನ್ನು ಹೆಣ್ಣು ಮಗುವಿಗೆ ಇಡಬೇಕು.* ಈ ಹೆಸರನ್ನು ಕೇಳಲು ಇಂಪಾಗಿ ಶುಭಕರವಾದ ಮತ್ತು *ಕೊನೆಯ ಅಕ್ಷರವು ಧೀರ್ಘಾಕ್ಷರಗಳ ಶಬ್ದ* ಬರುವ ಹಾಗೆ ಇರಬೇಕು. ಆದರೆ ಹೆಣ್ಣು ಮಗುವಿನ ಹೆಸರು ಕಡಿಮೆ ಅಕ್ಷರಗಳಲ್ಲಿ ಇರುವುದು ಒಳ್ಳೆಯದು.

ನಾಮಕರಣ ಕಾರ್ಯಕ್ರಮವು ದಾನಧರ್ಮಗಳಿಂದ ಕೂಡಿರಬೇಕೆಂದು ಋಷಿಮುನಿಗಳು ಹೇಳಿದ್ದಾರೆ, ಈ ರೀತಿಯಾದ ಚಿಕ್ಕ ಪುಟ್ಟ ಶುಭ ಕಾರ್ಯಗಳಿಗೆ ಕುಟುಂಬ ಸದಸ್ಯರೆಲ್ಲಾ ಒಂದುಗೂಡುವುದರಿಂದ ಜೀವನ ಮಹತ್ವವೆನಿಸುವುದು.

ಸಂಗ್ರಹ ಮತ್ತು ಪ್ರಚಾರ;
ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑