Tel: 7676775624 | Mail: info@yellowandred.in

Language: EN KAN

    Follow us :


ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್

Posted Date: 09 Oct, 2019

ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್

ಚನ್ನಪಟ್ಟಣ: ಕಲೆ ಎಂಬುದು ಕೇವಲ ಕೆಲವು ಗಂಟೆಗಳಿಗೆ ಸೀಮಿತವಾಗದೆ ತಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು, ಆಗಲೇ ಕಲೆಗೆ ಜೀವಂತಿಕೆ ತುಂಬಲು ಸಾಧ್ಯ ಎಂದು ಹಲಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಿ ಸುರೇಶ್ ಹೇಳಿದರು.

ಅವರು ತಾಲ್ಲೂಕಿನ ನೇರಳೂರು ಗ್ರಾಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ನೃಪತುಂಗ ಕನ್ನಡ ಸೇವಾ ಸಂಘ ದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ *ಜೋಡೆತ್ತುಗಳ ಆರ್ಭಟ* ಎಂಬ ಸಾಮಾಜಿಕ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ನಾಟಕ ಉದ್ಘಾಟನೆ ಮಾಡಿ ಮಾತನಾಡಿದ ವಕೀಲ ಬೊಮ್ಮೇಗೌಡರು ಗ್ರಾಮೀಣ ಭಾಗದಲ್ಲಿ ಜೀವಂತಿಕೆ ಉಳಿಸಿಕೊಂಡಿದ್ದ ನಾಟಕಗಳು ಇಂದು ನಗರಗಳಲ್ಲೂ ಪ್ರದರ್ಶನಗೊಳ್ಳುತ್ತಿರುವುದು ಕಲೆ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ, ಕಲಾವಿದರು ಸಕ್ರಿಯವಾಗಿದ್ದರೆ ಜೀವನದಲ್ಲಿ ಎಂತಹ ಕಷ್ಟಗಳನ್ನು ಎದುರಿಸಲು ಸಶಕ್ತನಾಗಿರುತ್ತಾನೆ ಎಂದರು.


ತಾಲ್ಲೂಕು ಪಂಚಾಯತಿ ಸದಸ್ಯ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಎನ್ ಎಸ್ ಪ್ರಕಾಶ್ ಮತ್ತು ಕಾಂತರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೆಜ್ಜಲಗೆರೆ ಚಂದ್ರಶೇಖರ ನಾಟಕ ನಿರ್ದೇಶನ ಮಾಡಿದರೆ ಮಂಡ್ಯ ರಾಜೇಂದ್ರ ಸಂಗೀತ ನೀಡಿದರು. ಪ್ರಾಕ್ಟೀಸ್ ಮೇನೇಜರ್ ಮಲ್ಲೇಶ್ ನೇತೃತ್ವದಲ್ಲಿ ಶ್ರೀನಿವಾಸ, ನವೀನಕುಮಾರ್, ಲಿಂಗರಾಜು, ಮಧುಕುಮಾರ್, ಸಿದ್ದರಾಜು, ಎನ್ ಕೆ ಯೋಗೇಶ್, ರಾಮು, ಪ್ರಕಾಶ್, ಲೋಕೇಶ್, ಮಮತ, ಚೈತ್ರ, ಪ್ರಿಯಾಂಕಾ ಮತ್ತು ಭವ್ಯ ರವರು ನಾಟಕದಲ್ಲಿ ಅಭಿನಯಿಸಿ ನೆರೆದಿದ್ದ ವೀಕ್ಷಕರ ಮನೆಸೂರೆಗೊಂಡರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑