Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?

Posted Date: 01 Nov, 2019

ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?


ಸ್ತ್ರೀಯರು ಪ್ರಾರ್ಥನಾ ಸಮಯದಲ್ಲಿ ದೇವರ ವಿಗ್ರಹದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಬಾರದೆಂದು ಹೇಳಲಾಗಿದೆ. *ಸಾಷ್ಟಾಂಗ ನಮಸ್ಕಾರ ಮಾಡಲು ಎಂಟು ಅಂಗಗಳಾದ ಎದೆ, ನೊಸಲು (ಮೂಗು), ಶಬ್ದ, ಮನಸ್ಸು, ಕೈಗಳು, ಕಣ್ಣುಗಳು, ಮೊಣಕಾಲು ಮತ್ತು ಪಾದಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ.*


*ಸಾಷ್ಟಾಂಗ ನಮಸ್ಕಾರ ಮಾಡುವಾಗ ಎರಡು ಪಾದಗಳ ಮುಂದಿನ ಭಾಗ, ಮೊಣಕಾಲುಗಳು, ಎದೆ ಮತ್ತು ನೊಸಲನ್ನು ಮಾತ್ರ ನೆಲಕ್ಕೆ ತಾಗಿಸಬೇಕು. ಸಾಷ್ಟಾಂಗ ನಮಸ್ಕಾರ ಮಾಡುವಾಗ ಕೈಗಳನ್ನು ತಲೆ ಭಾಗದ ಮೇಲೆ ಎತ್ತಿ ನಮಸ್ಕರಿಸುತ್ತಾ ದೇವರನ್ನು ಪ್ರಾರ್ಥಿಸಬೇಕು. ಪ್ರಾರ್ಥಿಸುತ್ತಿರುವಾಗ ದೇವರ ವಿಗ್ರಹದ ಮೇಲೆ ದೃಷ್ಟಿಯನ್ನು ನೆಟ್ಟು ಮನಸ್ಸಿನಲ್ಲಿ ದೇವರನ್ನು ಧ್ಯಾನಿಸಬೇಕು. ಶಾಸ್ತ್ರದ ಪ್ರಕಾರ ದೇವಾಲಯದಲ್ಲಿ ಒಂದು ಸಾಷ್ಟಾಂಗ ನಮಸ್ಕಾರ ಮಾಡಿದರೆ ಹತ್ತು ಅಶ್ವಮೇಧ ಯಾಗ ಮಾಡಿದ ಫಲವನ್ನು ಹೊಂದಬಹುದಾಗಿದೆ ಹೇಳಲಾಗಿದೆ.* ಭಗವಂತನಿಗೆ ಸಂಪೂರ್ಣ ಶರಣಾಗುವುದೇ ಈ ನಮಸ್ಕಾರದ ಮೂಲ ಉದ್ದೇಶ.


ವಿಜ್ಞಾನ ದ ಪ್ರಕಾರ ನಮ್ಮ ದೇಹದಲ್ಲಿನ ನರನಾಡಿಗಳಿಗೆ ಮೆದುಳಿನ ಚೈತನ್ಯ ತುಂಬುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ಆರೋಗ್ಯ ವೃದ್ದಿಸುತ್ತದೆ.*ಈ ರೀತಿಯ ಸಾಷ್ಟಾಂಗ ನಮಸ್ಕಾರಕ್ಕೆ ಸ್ತ್ರೀಯರ ಶರೀರ ನಿರ್ಮಾಣ ತಕ್ಕುದಾದುದಲ್ಲ.*

ಪುರುಷರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ಬಹಳ ಕಷ್ಟಕರವಾಗಿದೆ, ಆಧುನಿಕ ಶಾಸ್ತ್ರವೂ ಸಹ ಸ್ತ್ರೀಯರು ಈ ರೀತಿಯ ನಮಸ್ಕಾರ ಮಾಡುವುದರಿಂದ ಅವರ *ಗರ್ಭಾಶಯ ಸ್ಥಾನ ಪಲ್ಲಟವಾಗುವ ಅವಕಾಶ ಹೆಚ್ಚು* ಎಂದು ಹೇಳಿದ್ದಾರೆ.


ಆದ್ದರಿಂದ ಸ್ತ್ರೀಯರು ಮೊಣಕಾಲುಗಳ ಮೇಲೆ ನಿಂತು ನಮಸ್ಕರಿಸುವುದು ಧ್ಯಾನಿಸುವುದನ್ನಷ್ಟೇ ಮಾಡಬಹುದು. ಇದರಿಂದ ಯಾವ ಹಾನಿಯೂ ಆಗುವುದಿಲ್ಲ ಹಾಗೂ ಇದರಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮ ದೊರೆತು ಆರೋಗ್ಯ ವೃದ್ದಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑