Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ

Posted Date: 01 Nov, 2019

ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಶಾಲೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಮತ್ತು ವಾಹನಗಳ ಮಾಲೀಕರು ಸಹ ೬೪ ನೇ ಕನ್ನಡ ರಾಜ್ಯೋತ್ಸವವನ್ನು‌ ವಿಜೃಂಭಣೆಯಿಂದ ಆಚರಿಸಿದರು.


ನಗರದ ಪ್ರಮುಖ ಕೇಂದ್ರವಾದ ನಗರಸಭೆ ಆವರಣದಲ್ಲಿ ನಾಡ ದೇವತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾಂಕರಿಗೌಡ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.


ಕನ್ನಡ ರಾಜ್ಯೋತ್ಸವ ಎಂದರೆ ಅದು ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಸಾಮಾನ್ಯ, ಅವರು ಸಹ ಗಾಂಧಿ ಭವನದ ಮುಂದೆ ಇರುವ ಕುವೆಂಪು ರವರ ಪ್ರತಿಮೆಗೆ ಹೂವಿನ ಹಾರ ಹಾಕಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಜಿಲ್ಲಾಧ್ಯಕ್ಷ ಸಿಂಲಿಂ ನಾಗರಾಜು, ತಾಲ್ಲೂಕು ಅಧ್ಯಕ್ಷ ಬಿ ಚಲುವರಾಜು, ಪದಾಧಿಕಾರಿಗಳಾದ ಶ್ರೀನಿವಾಸ ರಾಂಪುರ, ಮಂಜೇಶಬಾಬು, ಹಿರಿಯ ಮುತ್ಸದ್ದಿಗಳಾದ ಬೆಟ್ಟಯ್ಯ, ಮಲ್ಲಯ್ಯ, ಪುಟ್ಟಲಿಂಗಯ್ಯ, ಹುಲುವಾಡಿ ಶಿವಕುಮಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀನಿವಾಸ ಉಪಸ್ಥಿತರಿದ್ದರು.


ನಗರದ ವರ್ತಕರ ಸಂಘದಿಂದ ನಿಂಬೆಹಣ್ಣು ವೃತ್ತ (ಕಳೆದ ವರ್ಷ ಬಸವೇಶ್ವರ ವೃತ್ತ ಎಂದು ಘೋಷಿಸಿಕೊಂಡಿದೆ) ದಲ್ಲಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶಗೌಡ ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.


ಇನ್ನಳಿದಂತೆ ಮಂಗಳವಾರಪೇಟೆ ಶಾಲೆ, ಹೋಬಳಿ ಮಟ್ಟದ ದೊಡ್ಡ ಶಾಲೆಗಳು, ಸಂಘಸಂಸ್ಥೆಗಳು ಹಾಗೂ ಆಟೋ ಮತ್ತು ಹಲವಾರು ವಾಹನಗಳ ಮಾಲೀಕರು ಮತ್ತು ಚಾಲಕರು ವಾಹನಗಳನ್ನು ಶೃಂಗರಿಸಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑