Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

Posted Date: 05 Nov, 2019

ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


*ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?*


ಕಿವಿ ಗುಯ್ಯೆಂದು ಶಬ್ದ ಬರುವುದರಿಂದ ಭಕ್ತರು ದೇವಾಲಯದ ಹತ್ತಿರ ಪಟಾಕಿಗಳನ್ನು ಸುಡಬಾರದೆಂದು ಹೇಳಿದ್ದಾರೆ. *ಈ ಶಬ್ದಗಳ ಕಾರಣದಿಂದ ನಿದ್ರಾವಸ್ತೆಯಲ್ಲಿರುವ ದೈವ ವಿಗ್ರಹವು ಜಾಗೃತಗೊಳ್ಳುತ್ತದೆಂದು ಈ ಪಟಾಕಿಗಳನ್ನು ಸಿಡಿಸಲು ಒಪ್ಪುತ್ತಾರೆ.* ಆದರೆ ಪಟಾಕಿಗಳನ್ನು ದೇವಾಲಯದ ಪ್ರಾಂಗಣದಲ್ಲಿ ಸಿಡಿಸಲು ಮತ್ತೊಂದು ಶಾಸ್ತ್ರೀಯ ಅರ್ಥವಿದೆ.


ಈ ಶಾಸ್ತ್ರೀಯ ಅಂಶವು *ಬಿಗ್-ಬ್ಯಾಂಗ್ ಥಿಯರಿ* ಬೆಳಕಿಗೆ ಬಂದ ನಂತರ ದೇವಾಲಯದಲ್ಲಿನ ಪಟಾಕಿಗಳ ಶಬ್ದಗಳು ಈ ಬಿಗ್ ಬ್ಯಾಂಗ್ ಥಿಯರಿ  *(ವಿಶ್ವಾರಂಭದಲ್ಲಿದ್ದ ಒಂದು ಮೂಲ ಪದಾರ್ಥ ಒಮ್ಮೆಲೆ ಸಿಡಿಯಿತು ಎನ್ನುವುದು ಶಾಸ್ತ್ರಾಭಿಪ್ರಾಯ)* ಗೆ ಚಿನ್ಹೆಯಾಗಿ ಕಾಣುತ್ತದೆ.


ಈ ರೀತಿಯಾಗಿ ಪಟಾಕಿಗಳನ್ನು ಸುಡುವುದರಿಂದ ಉತ್ಪನ್ನವಾಗುವ *ಶಬ್ದ ತರಂಗಗಳು ಮತ್ತು ಹೊಗೆ ಕೊಳಗೇರಿಗಳಿಂದ ಉತ್ಪತ್ತಿಯಾಗುವ ಕ್ರಿಮಿಕೀಟಗಳನ್ನು ನಾಶ ಮಾಡುತ್ತದೆ.* ವಿಸ್ಫೋಟಗಳು ಸಾಮಾನ್ಯ ರೂಪದಲ್ಲಿ ಫಟ್ ಎನ್ನುವ ಶಬ್ದವನ್ನು ಕೆಲವು ಮಂತ್ರಗಳಲ್ಲಿ ಉಪಯೋಗಿಸಲ್ಪಡುತ್ತದೆ.


*ಈ ಬಿಗ್ ಬ್ಯಾಂಗ್ ಥಿಯರಿ (ಈ ವಿಷಯ ಹಿಂದೂ ಶಾಸ್ತ್ರಗಳಲ್ಲಿ ಎಂದೋ ಅಡಕವಾಗಿದೆ.)* ಪ್ರಕಾರ ವಿಶ್ವದ ಉತ್ಪತ್ತಿ ಮೊದಲು ಒಂದು ಭಯಂಕರವಾದ ವಿಸ್ಫೋಟದಿಂದ ಪ್ರಾರಂಭವಾಗಿದೆ. ಈ ಪಟಾಕಿಗಳನ್ನು ಸುಡುವಾಗ ಈ ವಿಸ್ಫೋಟವನ್ನು ನೆನಪಿಗೆ ತರಿಸುತ್ತದೆ. ಈ ರೀತಿಯಲ್ಲಿ ನಾವುಗಳು ಭಗವಂತನ ಶಕ್ತಿಯ ಸ್ಮರಣೆಗೆ ಪಟಾಕಿಗಳನ್ನು ಸಮರ್ಪಣೆ ಮಾಡುವುದರಿಂದ ಇದು ಭಗವಂತನಿಗೆ ಪ್ರಿಯಕರವಾದ ಕ್ರೀಡೆ ಎಂದು ನಾವು ಭಾವಿಸಬಹುದು.



*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑