Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

Posted Date: 06 Nov, 2019

ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?


ದಕ್ಷಿಣ ಭಾರತದಲ್ಲಿ ಪಾಯಸದಂತಹ ತೆಳ್ಳನೆಯ ಸಿಹಿ ಅಡುಗೆಯನ್ನು ಅಮ್ಮನವರಿಗೆ (ಹೆಣ್ಣು ದೇವತೆಗಳಿಗೆ) ಕನಿಷ್ಠ ವರ್ಷಕ್ಕೊಮ್ಮೆಯಾದರೂ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಈ ರೀತಿಯಾದ ಸಿಹಿ ಅಡುಗೆಯನ್ನು ಮನೆಯ ಮುಂದೆ ಇಟ್ಟು ದೇವತೆಗಳಿಗೆ ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಳ್ಳುತ್ತಾರೆ.


ಹೆಚ್ಚಾಗಿ ಸ್ತ್ರೀಯರು ಅಮ್ಮನವರಿಗೆ ನೈವೇದ್ಯವನ್ನು ಇಟ್ಟು ಪೂಜಿಸುತ್ತಾರೆ. ಈ ಆಚಾರ ಭಗವಂತನ ಮುಂದೆ ಭಕ್ತನು ಶರಣಾಗತಿ ಆಗುವುದನ್ನು ಸೂಚಿಸುತ್ತದೆ. *ಒಲೆಯ ಮೇಲೆ ನೈವೇದ್ಯವನ್ನು ಕುದಿಸುವುದು ಎಂದರೆ ಭಕ್ತನು ತನ್ನ ಅಹಂಕಾರವನ್ನು ಮತ್ತು ಕೆಟ್ಟ ಗುಣಗಳನ್ನು ತೊಲಗಿಸಿಕೊಳ್ಳುವುದಕ್ಕೆ ಸೂಚನೆಯಾಗಿದೆ.*


ಅಹಂಕಾರ ತೊಲಗಿ ಭಗವಂತನಿಗೆ ಭಕ್ತನು ಶರಣಾಗತನಾಗುವನು. ಗ್ಯಾಸ್ ಒಲೆಯಲ್ಲದೆ ಸೌದೆ ಒಲೆಯಿದ್ದರೆ ಆ ಅಡುಗೆ ಬಹಳ ಕಷ್ಟಕರವೇ ಹೌದು. *ಒಲೆಯಿಂದ ಬರುವ ಶಾಖ ಮತ್ತು ಹೊಗೆ ಸಹನಾ ಶಕ್ತಿಯನ್ನು ಹೆಚ್ಚಿಸುತ್ತದೆ.* ಜೀವನ ಕಷ್ಟಗಳಮಯ, ಸಹನೆಯಿಲ್ಲದವನು ಈ ಕಷ್ಟಕರವಾದ ಜೀವನವನ್ನು ಹೇಗೆ ಸಮರ್ಥವಾಗಿ ಜೀವಿಸಬಲ್ಲನು ? *ಸಹನೆ ಎಂಬುದು ಮನುಷ್ಯರಿಗೆ ಒಂದು ಆಯುಧವೇ ಸರಿ.*


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑