Tel: 7676775624 | Mail: info@yellowandred.in

Language: EN KAN

    Follow us :


ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

Posted Date: 07 Nov, 2019

ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖರ್ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕುಂದುಕೊರತೆಗಳು ಹಾಗೂ ದೂರು ಸ್ವೀಕಾರ ಮಾಡಿ ಮಾತನಾಡಿದರು.


ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಚಂದ್ರಶೇಖರ್ ಕಾನೂನನ್ನು ಆದಷ್ಟೂ ತಿಳಿದುಕೊಳ್ಳಬೇಕು. ನೀವು ಅನಾಮಧೇಯ ದೂರು ನೀಡಿದರೆ ಸ್ವೀಕರಿಸುವುದಿಲ್ಲ. ತಮ್ಮ ವಿಳಾಸದ ಜೊತೆಗೆ ರಿಜಿಸ್ಟರ್ ಪೋಸ್ಟ್ ಮೂಲಕ ಅಥವಾ ಕಛೇರಿಗೆ ನೇರ ದೂರು ಸಲ್ಲಿಸಿಬೇಕು. ತಮ್ಮ ಹೆಸರನ್ನು ಗೌಪ್ಯವಾಗಿಟ್ಟು ತನಿಖೆ ನಡೆಸಲಾಗುವುದು ಎಂದರು.


ಕೆಲ ದೂರುದಾರರು ಮೌಖಿಕ ದೂರು ನೀಡುವುದನ್ನು ಖಂಡಿಸಿದ ಅವರು ಅಂಚೆ ಮೂಲಕ ಕಳುಹಿಸಿ ಅಥವಾ ಇಲ್ಲಿಯೇ ಲಿಖಿತವಾಗಿ‌ ದೂರು ನೀಡಿ ಎಂದು ಆಗ್ರಹಿಸಿದರು.

ನಗರಸಭೆ ಮತ್ತು ತಾಲ್ಲೂಕು ಕಛೇರಿಗಳಲ್ಲಿ ಖಾತೆ ವಿಳಂಬ, ಹೆಚ್ ಪಿ ಗ್ಯಾಸ್ ಸಿಲಿಂಡರ್ ಸೇವಾ ದರ ಸೇರಿದಂತೆ ಕೆಲವರು ಲಿಖಿತ ದೂರು ನೀಡಿದರು.


ಸಾಮಾಜಿಕ ಕಾರ್ಯಕರ್ತ ಗಜೇಂದ್ರ ಸಿಂಗ್, ವಕೀಲ ಸುರೇಶ್ ಸೇರಿದಂತೆ ದೂರುದಾರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑