Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

Posted Date: 07 Nov, 2019

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?


ದೇವಾಲಯಗಳಲ್ಲಿ ಶಂಖ ಊದುವುದನ್ನು ನಾವು ಕೇಳಿದ್ದೇವೆ. *ಇದು ಇತರ ನಾದಗಳೊಂದಿಗೆ ಮುಖ್ಯವಾಗಿ ಘಂಟಾನಾದದೊಂದಿಗೆ ದೇವತಾ ಪೂಜೆ ಮಾಡುವಾಗ ಕೇಳಿಸುತ್ತದೆ. ದೈವ ವಿಗ್ರಹದ ಸುತ್ತಲೂ ಬಲದಿಂದ ಎಡಕ್ಕೆ ದೀಪವನ್ನು ತೋರಿಸುತ್ತಿರುವಾಗ ಆಗಲಿ ಇಲ್ಲವೇ ಭಕ್ತಾಧಿಗಳಿಗೆ ಮಂಗಳಾರತಿ ಕೊಡುತ್ತಿರುವಾಗಲಿ ಶಂಖನಾದವನ್ನು ಕೇಳುತ್ತೇವೆ.*


ಆರತಿ ಸಮಯದಲ್ಲಿ ಶಬ್ದ-ದೃಶ್ಯ ದಿವ್ಯ ಅನುಭವವನ್ನು ಭಕ್ತರು ಅನುಭವಿಸುವರು. *ಶಂಖದಿಂದ ಬರುವ ಶಬ್ದ ಮಂಗಳಕರವಾದುದು ಹಾಗೂ ದಿವ್ಯವಾದ ಓಂ ಕಾರವನ್ನು ಧ್ವನಿಸುತ್ತದೆ.* ಶಂಖನಾದವನ್ನು ಬಹಿರಂಗವಾಗಿ (ಯುದ್ಧವನ್ನು) ಏನಾದರೂ ಪ್ರಕಟಿಸುತ್ತಿರುವಾಗ ಕೇಳಿಸಲಾಗುತ್ತದೆ. ನಮ್ಮೆಲ್ಲರ ಸ್ಮೃತಿಯಲ್ಲಿರುವ *ಪೌರಾಣಿಕ ಯುದ್ಧವಾದ ಕುರುಕ್ಷೇತ್ರವೂ ಶಂಖನಾದದಿಂದ ಪ್ರಾರಂಭವಾಯಿತು.*


*ಶಂಖವನ್ನು ಚನ್ನಾಗಿ ತೊಳೆದು ತೇದು ಕೆಲವು ಔಷಧಿಗಳಲ್ಲಿ ಅದನ್ನು ಪ್ರಧಾನವಾಗಿ ಬಳಸುತ್ತಾರೆ.* ಶಂಖಕ್ಕಿರುವ ಔಷಧೀಯ ಗುಣಗಳಿಂದಲೇ ಅದನ್ನು ಉಪಯೋಗಿಸುವರು. *ಶಂಖನಾದವು ನಮ್ಮ ಮೆದುಳಿನಲ್ಲಿ ಪ್ರಕಂಪನೆಗಳನ್ನು ಸೃಷ್ಟಿಸಿ ಅನುಕೂಲ ಪ್ರಭಾವವನ್ನು ಉಂಟುಮಾಡುತ್ತದೆ* ಎಂದು ಆಧುನಿಕ ಶಾಸ್ತ್ರ ತಿಳಿಯಪಡಿಸಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑