Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

Posted Date: 08 Nov, 2019

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?


ಪೂಜಾ ಸಮಯದಲ್ಲಿ ದೇವಾಲಯದಿಂದ ನಾವು ಘಂಟಾನಾದವನ್ನು ಕೇಳುತ್ತೇವೆ. ಈ ಶಬ್ದವನ್ನು ಕೇಳಿದರೆ ನಮ್ಮಲ್ಲಿ ಭಕ್ತಿ ಭಾವವು ಜಾಗೃತಗೊಳ್ಳುತ್ತದೆ. ಇಂದಿಗೂ ಸಹ ನಮ್ಮ ದೇಶದಲ್ಲಿ ಕೆಲವು ಗ್ರಾಮಗಳಲ್ಲಿ ಎತ್ತುಗಳ ಕೊರಳಲ್ಲಿ ಹಿತ್ತಾಳೆಯ ಘಂಟೆಗಳನ್ನು ಕಟ್ಟಿರುವುದನ್ನು ನೋಡಬಹುದು. ಆ ಘಂಟೆಗಳ ಶಬ್ದವು ಬಹಳ ರಮಣೀಯವಾಗಿದ್ದು ನಮ್ಮ ಸಂಪ್ರದಾಯದ ಭಾವನೆಗಳನ್ನು ಬಡಿದೆಬ್ಬಿಸುತ್ತದೆ.


ದೇವಾಲಯದಿಂದ ಹೊರಬೀಳುವ ವಿವಿಧ ಸ್ಥಾಯಿಗಳಲ್ಲಿರುವ ಘಂಟೆಗಳ ಶಬ್ದದ ಪ್ರಭಾವವನ್ನು ಅನೇಕ ಬಾರಿ ಅಧ್ಯಯನಕ್ಕೊಳಪಡಿಸಿದ್ದಾರೆ. ಪರಿಶೋಧಕರು ಘಂಟೆಯ ಶಬ್ದ ಓಂ ಕಾರವನ್ನು ಹೊರಡಿಸುತ್ತದೆಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಘಂಟೆಯ ಶಬ್ದ ತರಂಗದ ರೂಪದಲ್ಲಿ ವ್ಯಕ್ತವಾಗಿ ಕ್ರಮೇಣ ಕಡಿಮೆಯಾಗುತ್ತದೆ. ಅದರ ನಾದವಾದ ಓಂ ಮನಸ್ಸನ್ನು ಬಹಳವಾಗಿ ಪ್ರೇರೇಪಿಸುತ್ತದೆ. ಶಂಖನಾದದಿಂದ ಕೂಡಿದ ಘಂಟನಾದವು ಭಕ್ತರ ಮನದಲ್ಲಿ ಭಕ್ತಿ ಭಾವವನ್ನು ಉಂಟು ಮಾಡುತ್ತದೆ. ಹಾಗೆಯೇ ಈ ನಾದವು ಏಕಾಗ್ರತ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑