Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದ ಕುನ್ಸ್ ಎಂ ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Posted Date: 26 Nov, 2019

ಚನ್ನಪಟ್ಟಣದ ಕುನ್ಸ್ ಎಂ ಗೌಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಚನ್ನಪಟ್ಟಣ: ನಗರದ ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡ ಮತ್ತು ಡಾ ಪ್ರೀತಿ ಎಂ ಗೌಡ ರವರ ಪುತ್ರ ಕುನ್ಸ್ ಎಂ ಗೌಡ ರವರು ಸ್ಕೂಲ್ ಫೆಡರೇಷನ್ ಗೇಮ್ಸ್‌ ಆಫ್ ಇಂಡಿಯಾದ (ಎಸ್ ಜಿ ಎಫ್ ಎ) ೬೫ ನೇ ರಾಷ್ಟ್ರ ಮಟ್ಟದ ೧೭ ವರ್ಷದ ವಯೋಮಿತಿಯ ಬಾಲಕರ ಟೆನ್ನಿಸ್ ಪಂದ್ಯಾವಳಿಗಳಿಗೆ ರಾಜ್ಯ ತಂಡದಲ್ಲಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ.


ಇದಕ್ಕೂ ಮೊದಲು ಎರಡು ಬಾರಿ ಆಯ್ಕೆಯಾಗಿದ್ದು ಇಂದು ಮೂರನೆ ಬಾರಿ ಆಯ್ಕೆಯಾಗುವ ಮೂಲಕ  ತಾಲ್ಲೂಕಿನ ಹೆಸರನ್ನು ಅಜರಾಮರಗೊಳಿಸಿದ್ದಾರೆ. ಇವರ ತಂಡದಲ್ಲಿ ಆದಿತ್ಯ ಶ್ರೀನಿವಾಸನ್, ಗೋಕುಲಾನಂದನ್, ಸುಶಾಂತ್ ಪಿ ಗೌಡ ಹಾಗೂ ಕುಶಾಲ್ ವಿ ಗೌಡ ರವರು ಆಯ್ಕೆಯಾಗಿದ್ದು ಇದೇ ತಿಂಗಳ ೨೮ ರಿಂದ ಡಿಸೆಂಬರ್ ೦೧ ರವರೆಗೆ ಹರಿಯಾಣದ ಕರ್ನಾಲ್ ನಲ್ಲಿ ಪಂದ್ಯ ನಡೆಯಲಿದೆ.


ಕುನ್ಸ್ ಎಂ ಗೌಡ ರವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಎಸ್ ಎ ಕಿಶೋರ್ ಕೇಂದ್ರದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದು ಓದಿನ ಜೊತೆಗೆ ಟೆನ್ನಿಸ್ ಆಟದಲ್ಲಿ ಪ್ರತಿಭೆ ಮೆರೆದಿದ್ದು ಅಂತರರಾಷ್ಟ್ರೀಯ ಆಟಗಾರನಾಗಲಿ ಎಂದು ಕುಟುಂಬ ಸದಸ್ಯರು ಮತ್ತು ಅಖಿಲ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಶುಭ ಕೋರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑