Tel: 7676775624 | Mail: info@yellowandred.in

Language: EN KAN

    Follow us :


ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು

Posted Date: 04 Dec, 2019

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡನ್ ನಲ್ಲಿ ನಿಲ್ಲಿಸಿದ್ದ *ನಗುಮಗು* *(KA42 G 733)* ಎಂಬ ವಾಹನದ ಕಿಟಕಿ ಗಾಜನ್ನು ಮಂಗಳವಾರ ತಡರಾತ್ರಿ ಹೊಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಔಷಧೋಪಚಾರಿಕ ಸಲಕರಣೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದಾಗಿ ನಗರದ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.


ವಾಹನದ ಹಿಂಬದಿಯ ಬಲಭಾಗದ ಗಾಜು ಹೊಡೆದಿರುವ ದುಷ್ಕರ್ಮಿಗಳು ರೋಗಿಗಳ ಅನುಕೂಲಕ್ಕೆ ವಾಹನದಲ್ಲಿ ಜೋಡಿಸಿದ್ದ *ಆಕ್ಸಿಜನ್ ವೆಂಟಿಲೇಟರ್ ಮಾನಿಟರ್, ಆಕ್ಸಿಜನ್ ಸಿಲಿಂಡರ್ ಮತ್ತು ಹೊಸ ಬದಲಿ ಚಕ್ರ* ವನ್ನು ಕದ್ದೊಯ್ದಿರುವುದಲ್ಲದೆ ವಾಹನದ ಬಹುತೇಕ ಭಾಗಗಳನ್ನು ತಡಕಾಡಿರುವುದಾಗಿ ಚಾಲಕ ರಮೇಶ್ ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ ಮಹೇಂದ್ರ ಕುಮಾರ್ ರವರು ಶೀಘ್ರವಾಗಿ ಕ್ರಮ ಕೈಗೊಂಡು‌ ಆರೋಪಿಗಳನ್ನು ಬಂಧಿಸುವಂತೆ ನಗರ ಪೋಲಿಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑