Tel: 7676775624 | Mail: info@yellowandred.in

Language: EN KAN

    Follow us :


ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್

Posted Date: 09 Dec, 2019

ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್

ರಾಮನಗರ: ಮುಖಪುಸ್ತಕ (Facebook) ದಲ್ಲಿ ಸಂತ್ರಸ್ತೆ ಪಶುವೈದ್ಯೆ ಡಾ ಪ್ರಿಯಾಂಕರೆಡ್ಡಿ ವಿರುದ್ದ ಜನಾಂಗೀಯ ದ್ವೇಷ ಹಾಗೂ ಕೆಟ್ಟ ಭಾಷೆ ಬಳಸಿ ಹಾಕಿದ ಪೋಸ್ಟ್ ವಿರುದ್ದ ರೆಡ್ಡಿ ಸಮುದಾಯದ ಮುಖಂಡರು ರಾಮನಗರ ಜಿಲ್ಲಾ ಎಸ್ಪಿ ಅನೂಪ್ ಶೆಟ್ಟಿ, ಸೈಬರ್ ಕ್ರೈಂ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರಿಂದ ಪೋಲಿಸರು ಪ್ರಥಮ ವರದಿ (FIR) ದಾಖಲಿಸಿಕೊಂಡಿದ್ದಾರೆ.

ಹೈದರಾಬಾದ್ ನ ಪಶುವೈದ್ಯೆ ಡಾ ಪ್ರಿಯಾಂಕರೆಡ್ಡಿ ಯವರನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ನಂತರ ನರ ರಾಕ್ಷಸರನ್ನು ‌ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕೆಂದು ಧರ್ಮತೀತವಾಗಿ, ಜಾತ್ಯಾತೀತವಾಗಿ ನಿರಂತರ ಪ್ರತಿಭಟನೆಗಳು ದೇಶದೆಲ್ಲೆಡೆ ಜರುಗಿದ ನಂತರ ಆರೋಪಿಗಳನ್ನು ಬಂಧಿಸಿ ಸ್ಥಳ ಪರಿಶೀಲನೆಗೆ ಕರೆದೊಯ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿಗಳನ್ನು ಗುಂಡು ಹೊಡೆದು ಸಾಯಿಸಿದ ನಂತರ ಟೀಕೆ ಟಿಪ್ಪಣಿಗಳು ಸಹಜವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

ಕೆಲವರು ಪ್ರಬುದ್ಧ ಹಾಗೂ ಮಾರ್ಮಿಕವಾಗಿ ಬರೆದರೆ ಭೂಹಳ್ಳಿ ಪುಟ್ಟಸ್ವಾಮಿ ಎಂಬ ಸಾಹಿತಿ  ಸಂಪೂರ್ಣ ಕೆಟ್ಟ ಪದಗಳನ್ನು, ಹೆಂಗಸರಷ್ಟೇ ಅಲ್ಲದೆ ಸಮಾಜದ ಸುಸಂಸ್ಕೃತರು, ಓದಲು ಅಸಹ್ಯ ಪಡುವಂತಹ ಪದಗಳನ್ನು ಬಳಸಿ ಪೋಸ್ಟ್ ಹಾಕಿರುವುದಾಗಿ ಅನೇಕ ಓದುಗರು ಅವರ ವಿರುದ್ದ ಹರಿಹಾಯ್ದಿದ್ದಾರೆ.

ಈ ನಿಟ್ಟಿನಲ್ಲಿ ರೆಡ್ಡಿ ಜನಾಂಗದ ಮುಖಂಡರು ಈ‌ ಮೇಲಿನ ಎಲ್ಲರಿಗೂ ಸಂಪೂರ್ಣ ವಿವರದೊಂದಿಗೆ ಲಿಖಿತ ದೂರು ಸಲ್ಲಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೂರು ದಾಖಲೆ ವೇಳೆ ಶಂಕರ್ ರೆಡ್ಡಿ, ಸಂದೀಪ್ ರೆಡ್ಡಿ, ಚಂದ್ರಶೇಖರ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಗೋ ರಾ ಶ್ರೀನಿವಾಸ...
ಮಿ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑