Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ

Posted Date: 15 Dec, 2019

ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ

ಚನ್ನಪಟ್ಟಣ: ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದ ನವ್ಯ ಸಂಗಮ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ರಿ ಸಂಸ್ಥಾಪಕ ಕಾರ್ಯದರ್ಶಿ ಜಯಸಿಂಹ ಎಸ್ ಹಾಗೂ ಅಪ್ಪಗೆರೆಯ ಪ್ರಜ್ಞಾ ಟ್ರಸ್ಟ್ ನ ಸಂಸ್ಥಾಪಕ ಸಿದ್ದರಾಮು ಅವರಿಗೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಬಹುಜನ ಸಾಹಿತ್ಯ ಅಕಾಡೆಮಿ ಕೊಡಮಾಡುವ ಡಾ ಬಿ ಆರ್ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-೨೦೧೯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


೨೦೧೯ ನೇ ಸಾಲಿನ ಈ ಪ್ರಶಸ್ತಿ ಪ್ರದಾನವನ್ನು ಅಕಾಡೆಮಿಯ ನ್ಯಾಷನಲ್ ಪ್ರೆಸಿಡೆಂಟ್ ನಲ್ಲಾ ರಾಧಾಕೃಷ್ಣ, ನ್ಯಾಷನಲ್ ಜನರಲ್ ಸೆಕ್ರೆಟರಿ ಡಾ ಯು ಸುಬ್ರಮಣಿಯನ್, ನವದೆಹಲಿಯ ಪ್ರೆಸಿಡೆಂಟ್ ( ಬಿ ಎಸ್ ಎ) ಕಾನ್ಪರೆನ್ಸ್ ಕನ್ ವಿನರ್ ಮನವೀರ್ ಸಿಂಗ್ ಪ್ರಚಾ, ಆಂಧ್ರ ಪ್ರದೇಶದ ತೋಟಗಾರಿಕಾ ಸಚಿವ ವೇಣುಗೋಪಾಲ್ ರಾಜ್ಯ ಸಂಸ್ಥೆಯ ಸಂಚಾಲಕರಾದ ಪ್ರತಾಪ್ ಹಾಗೂ ನ್ಯಾಶನಲ್ ಕಮಿಟಿಯ ಪ್ರೆಸಿಡೆಂಟ್ ಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನವದೆಹಲಿಯ ಗರ್ ವಾಲ್ ಭವನದ ಕರೋಲ್ ಬಾಗ್ ವೇದಿಕೆಯಲ್ಲಿ ಕಲ್ಪಿಸಿರುವ ಬಹುಜನ ಸಾಹಿತ್ಯ ಅಕಾಡೆಮಿ ಯವರಿಗೆ ಹಾಗೂ ಕಲಾವಿದರಾದ ಜಯಸಿಂಹ ಮತ್ತು ಸಿದ್ದರಾಮು ರವರನ್ನು ಅಪ್ಪಗೆರೆ ಸತೀಶ್ ಎಸ್ ಬಿ ಗಂಗಾಧರ, ರಮೇಶ್ ಅಮ್ಮಳ್ಳಿದೊಡ್ಡಿ, ಬಾಲು ಅಕ್ಕೂರು ಸತೀಶ್, ಅಂಬಾಡಹಳ್ಳಿ ಸಿದ್ದರಾಜು, ಚೆಕ್ಕರೆ ಪ್ರಕಾಶ್ ಬಾಣಂತಹಳ್ಳಿ ಹಾಗೂ ತಾಲ್ಲೂಕಿನ ಕಲಾಬಂಧುಗಳು ಸ್ನೇಹಿತರು ಈ ಸಂದರ್ಭದಲ್ಲಿ ಶುಭಹಾರೈಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑