Tel: 7676775624 | Mail: info@yellowandred.in

Language: EN KAN

    Follow us :


ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ

Posted Date: 24 Jan, 2020

ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ

ಚನ್ನಪಟ್ಟಣ: ಇಂದು ಇಲ್ಲಿನ ನಗರಸಭೆಯ ಆವರಣದಲ್ಲಿ ೨೦ ೨೦-೨೧ನೇ ಸಾಲಿನ ಆಯವ್ಯಯಕ್ಕೆ ಸಂಬಂಧಪಟ್ಟಂತೆ ನಗರಪ್ರದೇಶದಲ್ಲಿ ಕೈಗೊಳ್ಳ ಬೇಕಾದ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಪೌರಾಯುಕ್ತ ರಾದ ಶಿವನಾಂಕಾರಿಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಗೆ ನಗರಸಭೆಯ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರಕರ್ತರು, ಸಮಾಜಮುಖಿ ಚಿಂತಕರು, ವರ್ತಕರು, ವಕೀಲರು ಸೇರಿದಂತೆ ಎಲ್ಲರೂ ಭಾಗವಹಿಸಿ ತಮ್ಮ ತಮ್ಮ ಸಲಹೆಗಳನ್ನು ಕೊಡಲು ವಿನಂತಿ ಮಾಡಿಕೊಂಡಿದ್ದರು.೨೨ ನೇ ವಾಡ್೯ ನಲ್ಲಿನ ಸಂಕಷ್ಟಗಳ ಸುರಿಮಳೆಗೈದ ಸಯ್ಯದ್ ಇಬ್ರಾಹಿಂ, ಕಸ, ಚರಂಡಿ, ರಸ್ತೆ, ನೀರು ಕೊರತೆಗಳ ಬಗ್ಗೆ ಹೇಳಿ, ಎಂಜಿ ರಸ್ತೆ ಅಗಲೀಕರಣ ಉದ್ದೇಶ ಏನು, ಎಷ್ಟು ಖರ್ಚು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಸ್ಪಂದಿಸಿ, ೭೩ ಲಕ್ಷ ನಗರಸಭೆಯಿಂದ ಕಾಮಗಾರಿ ಮಾಡಲಾಗಿದೆ ಲ್ಯಾಂಡ್ ಆರ್ಮಿಯಿಂದ ಸ್ವಲ್ಪ ಭಾಗ ಮಾಡುತ್ತಿದ್ದಾರೆ, ಆದಷ್ಟೂ ಬೇಗ ಬೀದಿ ಬದಿ ವ್ಯಾಪಾರ ಸ್ಥಗಿತಗೊಳಿಸಿ ಅಗಲೀಕರಣ ಸಮಾಪ್ತಿಗೊಳಿಸುತ್ತೇವೆ ಎಂದು ಪೌರಾಯುಕ್ತರು ಹೇಳಿದರು.


ಎಂಜಿ ರಸ್ತೆ ವಿದ್ಯುತ್ ದೀಪ ಮತ್ತು ನೀರಿನ ಅಸಮರ್ಪಕ ಬಗ್ಗೆ ವರ್ತಕರುಗಳು ದೂರಿದರು.

ಕೆಂಪೇಗೌಡ ಬಡಾವಣೆ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆಯ ಚರಂಡಿ ನೀರು ರಸ್ತೆಗೆ ನುಗ್ಗತ್ತಿದ್ದು ಸರಿಪಡಿಸುವಂತೆ ತಿಮ್ಮೇಗೌಡ ಎಂಬುವವರು ದೂರನ್ನಿತ್ತರು.

ಸ್ಲಾಬ್‌ಗಳನ್ನು ಸರಿ ಯಾದ ಕ್ರಮದಲ್ಲಿ ಹಾಕುತ್ತಿಲ್ಲ, ಗುಣಮಟ್ಟದ ಕಾಂಕ್ರೀಟ್ ಮಾಡುತ್ತಿಲ್ಲ, ಮರಳುಹೊಲದ ಶಾಲೆಯ ಸಮೀಪ ಇರುವ ಚರಂಡಿ ನೀರನ್ನು ಸಮರ್ಪಕವಾಗಿ ಹರಿಯುವಂತೆ ಮಾಡಲು ಮನವಿ ನೀಡಲಾಯ್ತು.

ಇದು ಬಜೆಟ್ ಪೂರ್ವ ಭಾವಿ ಸಭೆಯಾಗಿದ್ದು, ದೂರು ಹೇಳುವುದು ಬೇಡ ಎಂದು ನಾಗರೀಕಲ್ಲೇ ಗೊಂದಲವುಂಟಾಗಿ ವಿಕೋಪಕ್ಕೆ ತಿರುಗಿದ ನಂತರ ಮಧ್ಯ ಪ್ರವೇಶಿಸಿದ ಪೌರಾಯುಕ್ತರು ಸಮಾಧಾನ ಪಡಿಸಿ, ದೂರುಗಳ ಜೊತೆಗೆ ಸಲಹೆ ನೀಡ ಬೇಕು ಎಂದು ಮನವಿ ಮಾಡಿದರು.


ಜೆಡಿಎಸ್ ಮುಖಂಡ ಮಂಗಳವಾರಪೇಟೆ ಸತೀಶ್ ಒಂದೊಂದ ವಾಡ್೯ ನಲ್ಲಿಯೂ ಸ್ಥಳೀ ಯರನ್ನು ಸೇರಿಸಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಹನ್ನೊಂದು ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡಿಲ್ಲ ಎಂಬ ಹಿರಿಯರ ದೂರಿಗೆ ನಾನು ಹೊಸದಾಗಿ ಬಂದಿದ್ದು ಶೀಘ್ರವಾಗಿ ಅಭಿವೃದ್ಧಿ ಮಾಡುತ್ತೇನೆ ಎಂದು ಆಯುಕ್ತರು ಉತ್ತರಿಸಿದರು.

೧೯-೨೦ ಸಾಲಿನಲ್ಲಿ ೩೮ ಲಕ್ಷರೂ ಬೀದಿ ದೀಪಗಳ ನಿರ್ವಹಣೆಗೆ ಖರ್ಚು ಮಾಡಿದ್ದು,  ಯಾವುದೇ ದೀಪಗಳು ಉರಿಯುತ್ತಿಲ್ಲ ಎಂದು ಮಾಹಿತಿ ಕಾರ್ಯಕರ್ತ ಸುಹೇಲ್ ಪ್ರಶ್ನಿಸಿದರೇ, ಮತ್ತೊಬ್ಬರು ಬೀದಿ ದೀಪಗಳು ಉರಿಯುತ್ತಿವೆ ಎಂಬುದು ಗೊತ್ತಾಗುವುದು ರಾತ್ರಿ ವೇಳೆ, ಆದರೆ ಅಧಿಕಾರಿಗಳು ಆ ವೇಳೆ ಇರುವುದಿಲ್ಲ, ಅಧಿಕಾರಿಗಳು ಸ್ಥಳೀ ಯವಾಗಿ ವಾಸಿಸದೇ ಬೆಂಗಳೂರಿನಿಂದ ಬರುತ್ತಾರೆ ಎಂದು ಮಂಗಳವಾರ ಪೇಟೆಯ ಮಂಜು ದೂರಿದರು.


ನಗರಸಭೆ ಮಾಜಿ ಸದಸ್ಯೆ  ಉಜ್ಮಾ ಇಶ್ರತ್ ಮಾತನಾಡಿ, ಎಲೆಕೇರಿ ಮತ್ತು ಕೂಡ್ಲೂರು ಗ್ರಾಮದ ಬಳಿ ಇರುವ ಕಸದ ಜಾಗದಲ್ಲಿ ಏಕೆ ವಿಲೇವಾರಿ ಮಾಡುತ್ತಿಲ್ಲ, ಆಟೋದವರು ಸ್ಪಂದಿಸುತ್ತಿಲ್ಲ, ಮಿನಿ ಜೆಸಿಬಿ ತಂದು ವರ್ಷಗಳೇ ಕಳೆದರೂ ಬೀದಿ ಗಿಳಿಯಲಿಲ್ಲ, ಕಾಂಪೋಸ್ಟ್ ಗೊಬ್ಬರ ತಯಾರಾಗುತ್ತಿಲ್ಲ, ಎಂಬ ದೂರು ಗಳಿಗೆ ಶೀಘ್ರ ವಾಗಿ ಪರಿಶೀಲಿಸಿ ಸರಿಪಡಿಸುತ್ತೇನೆ ಎಂದು ಉತ್ತರಿ ಸಿದರು.

ಅರ್ಧಂಬರ್ಧಕ್ಕೆ ನಿಂತಿ ರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಕುಡಿ ಯುವ ನೀರಿಗಾಗಿ ಬೋರ್‌ವೆಲ್‌ಗಳ ವ್ಯವಸ್ಥೆ, ಕಸ ವಿಲೇವಾರಿಗೆ ಸೂಕ್ತ ಯಾಡ್೯ ಮತ್ತು ಆಟೋ ವ್ಯವಸ್ಥೆ, ಕಂದಾಯ ಕಟ್ಟಲು ಬ್ಯಾಂಕ್‌ಗೆ ಅಲೆಸುವ ಬದಲು ನಗರಸಭೆಯಲ್ಲೇ ಒಂದು ಕೌಂಟರ್ ತೆಗೆಯು ವಂತೆ ಸಲಹೆ ನೀಡಲಾಯಿತು.

ಹಿರಿಯ ಸದಸ್ಯ ಉಮಾಶಂಕರ್ ಬಜೆಟ್ ಗೆ ಹಣ ಕ್ರೋಢೀಕರಿಸಲು ಟ್ರೇಡ್ ಲೈಸೆನ್ಸ್, ಕಂದಾಯ, ಬಾಡಿಗೆ ಇನ್ನಿತರ ಮೂಲ ಗಳನ್ನು ಸದೃಢಗೊಳಿಸಿ ಕೊಂಡು ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಲಹೆಗಳಿಗಿಂತಲೂ ದೂರುಗಳೇ ಹೆಚ್ಚು ಪ್ರಮಾಣದಲ್ಲಿ ವಿಜೃಂಭಿಸಿದವು. ನಗರ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಅಷ್ಟರ ಮಟ್ಟಿಗೆ ಜನರನ್ನು ಕಾಡುತ್ತಿವೆ. ಹಾಗಾಗಿ ಅವರು ಸಲಹೆ ಕೊಡುವ ತಾಳ್ಮೆಯನ್ನೇ ಹೊಂದಿಲ್ಲ.

ಪೌರಾಯುಕ್ತ ಶಿವನಂ ಕಾರಿಗೌಡ, ಲೆಕ್ಕಪರಿಶೋಧಕ ಚಂದ್ರು, ಮ್ಯಾನೇಜರ್ ನಾಗಣ್ಣ ಮತ್ತು ಅಧಿಕಾರಿ ಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑