Tel: 7676775624 | Mail: info@yellowandred.in

Language: EN KAN

    Follow us :


ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ

Posted Date: 24 Jan, 2020

ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ

ಚನ್ನಪಟ್ಟಣ: ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ಒಟ್ಟಾರೆ ಪೌರತ್ವ ಸಾಬೀತು ಕಾನೂನು ಬಹಿಸ್ಕರಿಸಿ ನಗರದ ಮುಸ್ಲಿಮರು ಮತ್ತು ಕೆಲ ಕಾಂಗ್ರೆಸ್ ಮುಖಂಡರು ಇಂದು ತಾಲ್ಲೂಕು ಕಛೇರಿಯ ಮುಂದೆ ಭಾರತದ ಧ್ವಜ, ಕರ್ನಾಟಕ ಧ್ವಜ, ಮಹಾತ್ಮ ಗಾಂಧಿ, ಡಾ ಬಿ ಆರ್ ಅಂಬೇಡ್ಕರ್ ಪೋಟೋ ಹಾಗೂ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದುಕೊಂಡು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ದಂಡಾಧಿಕಾರಿ ಸುದರ್ಶನ್ ರವರಿಗೆ ಸಹಿ ಸಂಗ್ರಹಿಸಿದ ಮನವಿ ಪತ್ರ ನೀಡಿದರು.


ಕಾಗಝ್ ನಹೀ ದಿಖಾಯೆಂಗೇ (ಕಾಗದ ನಾವು ತೋರಿಸುವುದಿಲ್ಲ) ಯಾವುದೇ ದಾಖಲೆ ನಾವು ನೀಡುವುದಿಲ್ಲ, ನಾವು ಭಾರತೀಯರು, ದೇಶ ಯಾರಪ್ಪನ ಸ್ವತ್ತಲ್ಲ, ದೇಶ ನಮ್ಮದು, ನಾವೆಲ್ಲರೂ ಭಾರತೀಯರು, ಸಾರ್ವಭೌಮತ್ವ, ಸಮಾಜವಾದ, ಜಾತ್ಯಾತೀತ ಪ್ರಜಾಪ್ರಭುತ್ವ ಗಣರಾಜ್ಯ ನಮ್ಮದಾಗಿದ್ದು ನಾವ್ಯಾಕೆ ದಾಖಲೆ ನೀಡಬೇಕು ಎಂದು ಪ್ರಶ್ನಿಸಿದರು.


ಪ್ರತಿಭಟನೆಯಲ್ಲಿ ಮುಸ್ಲಿಂ ಧರ್ಮಗುರುಗಳು, ಕಾಂಗ್ರೆಸ್ ಮುಖಂಡರು ಮಾತನಾಡಿದರು. ನಂತರ ತಹಶಿಲ್ದಾರ್ ಸುದರ್ಶನ್ ರವರಿಗೆ ಪೌರತ್ವ ಕಾಯಿದೆ ರದ್ದು ಮಾಡುವಂತೆ ಮನವಿ ಪತ್ರ ನೀಡಲಾಯಿತು. ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಎಎಸ್ಪಿ ರಾಮರಾಜನ್ ರವರೇ ವಹಿಸಿದ್ದರು.


ಪ್ರತಿಭಟನೆಯಲ್ಲಿ ಅಬ್ದುಲ್ ಅಲ್ಹಾನ್, ಸನಾವುಲ್ಲಾ, ಜಬಿಉಲ್ಲಾಖಾನ್ ಘೋರಿ, ನಿಜಾಮ್ ಪೌಜದಾರ್, ರಹಮತ್ ಸಲೀಂ, ಮುಸ್ತಿ ಬಾಕರ್, ಸಯ್ಯದ್ ಅಲ್ಲಾ ಬಕ್ಷಿ, ಮತ್ತು ಕಾಂಗ್ರೆಸ್ ಮುಖಂಡರಾದ ಶರತ್ಚಂದ್ರ, ಗಂಗಾಧರ, ಕೋಟೆ ಸಿದ್ದರಾಮಯ್ಯ, ಹನುಮಂತಯ್ಯ ಮತ್ತಿತರರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑