Tel: 7676775624 | Mail: info@yellowandred.in

Language: EN KAN

    Follow us :


ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ

Posted Date: 27 Jan, 2020

ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ

ಚನ್ನಪಟ್ಟಣ: ಎಲ್ಲಾ ಧರ್ಮದ, ಸಮುದಾಯದ ಜನರಿಗೆ ಪ್ರಶ್ನಿಸುವ ಹಕ್ಕು ನೀಡಿದ್ದೇ ನಮ್ಮ ಸಂವಿಧಾನ ಎಂದು ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.

ಅವರು ಇಂದು ೭೧ ನೇ ಗಣರಾಜ್ಯೋತ್ಸವದ ಪ್ರಯುಕ್ತ ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.


ದೇಶದ ಮೊದಲನೆ ರಾಷ್ಟ್ರೀಯ ಹಬ್ಬ ಇದಾಗಿದ್ದು ಸಂವಿಧಾನವೇ ನಮ್ಮ ಹಕ್ಕಾಗಿದೆ. ಹಕ್ಕುಗಳನ್ನು ಪ್ರತಿಪಾದಿಸಲು ನಮ್ಮ ಸಂವಿಧಾನ ಬಹಳ ಮುಖ್ಯ, 

ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಪಡೆದ ನಂತರ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರು, ರಾಷ್ಟ್ರದ ರಾಷ್ಟ್ರಪತಿ ಯಾಗಿ ರಾಧಾಕೃಷ್ಣನ್, ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಅಂಬೇಡ್ಕರ್ ರವರನ್ನು ಆಯ್ಕೆ ಮಾಡಲಾಯಿತು. ಪ್ರಪಂಚದಲ್ಲಿ ವಿಶೇಷ ಸಂವಿಧಾನ ನಮ್ಮದಾಗಿದೆ. ಕುಂದುಂಟಾಗದಂತೆ ನಡೆಯೋಣ ಎಂದರು.


ಧ್ವಜಾರೋಹಣ ಸಮಯದಲ್ಲಿ ತಹಶಿಲ್ದಾರ್ ಸುದರ್ಶನ್, ಶಿಕ್ಷಣಾಧಿಕಾರಿ ನಾಗರಾಜು, ಆರೋಗ್ಯ ಇಲಾಖೆಯ ವರಲಕ್ಷ್ಮಿ, ಶಿವಕುಮಾರ್ ಮ್ಯಾನೇಜರ್ ನಾಗಣ್ಣ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣ, ವೆಂಕಟಾಚಲಯ್ಯ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ರಾಷ್ಟ್ರ ನಾಯಕರ ವೇಷ ಭೂಷಣ ತೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:984585619.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑