Tel: 7676775624 | Mail: info@yellowandred.in

Language: EN KAN

    Follow us :


ಕನ್ನಡದ ಟ್ವಿಟರ್ ಆ್ಯಪ್ ಸಂಶೋಧಿಸಿದ ಯುವಕರು

Posted Date: 11 Feb, 2020

ಕನ್ನಡದ ಟ್ವಿಟರ್ ಆ್ಯಪ್ ಸಂಶೋಧಿಸಿದ ಯುವಕರು

ಮಂಡ್ಯ: ಇದುವರೆಗೆ ಹಿಂದಿ, ಇಂಗ್ಲೀಷ್ ಭಾಷೆಯ‌ ಟ್ವಿಟರ್ ಗಳಲ್ಲೆ ಕನ್ನಡದ ಟ್ವೀಟ್ ಮಾಡುತ್ತಿದ್ದ ಕನ್ನಡಿಗರಿಗೆ ಸಿಹಿ ಸುದ್ದಿಯೊಂದನ್ನು ಯುವಕರೀರ್ವರು ಹೊರತಂದಿದ್ದಾರೆ.


ಅಪ್ರಮೇಯ ಹಾಗೂ ಅಮಿತ್ ಎಂಬ ಯುವ ಉತ್ಸಾಹಿ ಯುವಕರ ತಂಡವೊಂದು ಕನ್ನಡದ್ದೆ ಟ್ವಿಟರ್ ಆ್ಯಪ್ ಅಭಿವೃದ್ದಿಪಡಿಸಿದೆ. *ಕೂ* ಎಂಬ ಹೆಸರಿನ ಈ ಆ್ಯಪ್ ನ್ನು ಅಭಿವೃದ್ಧಿ ಪಡಿಸಿ ಟ್ವಿಟರ್ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.


ಈ ಆ್ಯಪ್ ಕುರಿತು ಮಾತನಾಡಿದ ಅಪ್ರಮೇಯ ಇದರಿಂದ ಕನ್ನಡಿಗರು ಇನ್ನು ಮುಂದೆ ಕನ್ನಡದಲ್ಲೆ ಟ್ವೀಟ್ ಮಾಡಬಹುದು. ಇದರಿಂದ ಕನ್ನಡಿಗರು ತಮ್ಮದೆ ಅಭಿಪ್ರಾಯ, ವಿಚಾರಗಳನ್ನು ತಮ್ಮದೆ ಭಾಷೆಯಲ್ಲಿ ಹಂಚಿಕೊಳ್ಳಬಹುದಾಗಿದೆ. ಸಾಮಾನ್ಯರು ಸಹ ಇಲ್ಲಿ ತಮ್ಮದೆ ಮಾತೃಭಾಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಇದು ಮುಂದಿನ ದಿನಗಳಲ್ಲಿ ಕನ್ನಡ ಭಾಷೆಗೆ ಇನ್ನಷ್ಟು ತಂತ್ರಜ್ಞಾನದ ಬಲ ತಂದುಕೊಡಲಿದೆ ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...


ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑