Tel: 7676775624 | Mail: info@yellowandred.in

Language: EN KAN

    Follow us :


ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

Posted Date: 14 Feb, 2020

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.


ತಾಲ್ಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ವಾಹನವೇ ಇಲ್ಲ, ಕೆಲವು ಇಲಾಖೆಗಳಲ್ಲಿ‌ ಇದ್ದೂ ರಿಪೇರಿಯಾಗದೆ ಇರುವ ವಾಹನಗಳು ಉಂಟು. ಇಂತಹ ಸಮಯದಲ್ಲಿ ಲಕ್ಷಾಂತರ ರೂಪಾಯಿಗಳ ಸರ್ಕಾರಿ ವಾಹನ ಧೂಳು ತಿನ್ನುತ್ತಿರುವುದು ಎಷ್ಟು ಸರಿ. ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿರುವಂತೆ ಕಂಡು ಬರುವ ಈ ವಾಹನವನ್ನು ರಸ್ತೆ ಬದಿಯ ಗುಜರಿ ಅಂಗಡಿಯ ಬಳಿ ಏಕೆ ನಿಲ್ಲಿಸಿದ್ದಾರೆ ? ಯಾವ ಇಲಾಖೆಯ ವಾಹನ ಇದು ? ಮೇಲ್ನೋಟಕ್ಕೆ ಟ್ರಾಫಿಕ್ ಪೋಲಿಸ್ ವಾಹನ ಎಂದು ತಿಳಿದು ಬರುತ್ತಿದೆಯಾದರು, ಯಾಕೆ ಹೀಗೆ ನಿಲ್ಲಿಸಿದ್ದಾರೆ.


ಅಥವಾ ಯಾವುದಾದರೂ ಇಲಾಖೆಯಿಂದ ಯಾರಾದರೂ ಹರಾಜಿನಲ್ಲಿ ತೆಗೆದುಕೊಂಡಿದ್ದಾರಾ ? ಖರಿದಿಸಿದ್ದರೇ ಯಾಕೆ ಅವರು ಇನ್ನೂ ಇಲಾಖೆಯ ನೋಂದಣಿ ಸಂಖ್ಯೆಯನ್ನು ಬದಲಾಯಿಸಿಲ್ಲ. ? ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ? ಎಂಬುದು ದಿನನಿತ್ಯ ನೋಡುತ್ತಿರುವ ಪ್ರಯಾಣಿಕರ ಪ್ರಶ್ನೆಯಾಗಿದೆ. ಪೋಲಿಸ್ ಇಲಾಖೆಯ ಅಧಿಕಾರಿಗಳು ಇದಕ್ಕೆ ಉತ್ತರ ನೀಡುತ್ತಾರೆಯೇ ಎಂದು ಕಾದು ನೋಡೋಣಾ.ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑