Tel: 7676775624 | Mail: info@yellowandred.in

Language: EN KAN

    Follow us :


ಬೀದಿ ನಾಯಿಗಳ ದಾಳಿಗೊಳಗಾದ ಯುವಕ

Posted Date: 15 Feb, 2020

ಬೀದಿ ನಾಯಿಗಳ ದಾಳಿಗೊಳಗಾದ ಯುವಕ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ನಗರದ ಕನಕನಗರದ ಬಳಿ  ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ  ಘಟನೆ ನಡೆದಿದೆ.


ಮತ್ತಿಕೆರೆ ಗ್ರಾಮ ದವರಾದ ಈತ ಹೋಟೆಲ್ ಒಂದರಲ್ಲಿ ಅಡುಗೆ  ಭಟ್ಟನಾಗಿ ಕೆಲಸ ಮಾಡುತ್ತಿದ್ದು ಇವನು ಕೆಲಸ ಮುಗಿಸಿ ಮನೆಗೆ ಹೋಗು ವಾಗ ಈ ಘಟನೆ ನಡೆದಿದೆ.


೧೦ ರಿಂದ ೧೫ ಸಂಖ್ಯೆಯ ನಾಯಿಗಳಿದ್ದ ಗುಂಪು ಹಠಕಾಯಿಸಿದ್ಧು ಇವರು ಬೈಕ್ ನಿಂದ ಕೆಳಗೆ ಬಿದ್ದ ಮೇಲೆ ಅವರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.


ತಕ್ಷಣ ಅಲ್ಲಿಗೆ ಬಂದ ಅಕ್ಕ ಪಕ್ಷದವರು ಅಲ್ಲಿಂದ ನಾಯಿಗಳನ್ನು ಓಡಿಸಿದ್ದಾರೆ, ತೀವ್ರ ಗಾಯಗೊಂಡ ಗಾಯಾಳು ಪ್ರಸನ್ನ ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಲ್ಲಿನ ಸಾತನೂರು ವೃತ್ತ ಹಾಗೂ ಲಾಳಾಘಟ್ಟ ವೃತ್ತಗಳಲ್ಲಿ ಈ ಬೀಡಾಡಿ ನಾಯಿಗಳ ತಂಡವು ಇರುತ್ತವೆ. ಅವು ಯಾವಾಗ ರೊಚ್ಚಿಗೆ ಏಳುತ್ತವೆ ಎಂತಲೇ ತಿಳಿಯುವುದಿಲ್ಲ.ಈ ಸಂಬಂಧ ನಗರಸಭೆ ಗಮನಹರಿಸಲು ಸಾರ್ವಜನಿಕರು ಒತ್ತಾಯ ಪಡಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑