Tel: 7676775624 | Mail: info@yellowandred.in

Language: EN KAN

    Follow us :


ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

Posted Date: 15 Feb, 2020

ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ್ಥೆ ಹೇಳತೀರಾದಾಗಿದೆ.

ಪುನಿತಾ ವೈನ್ ಸ್ಟೋರ್ ಮತ್ತು ಪೆಟ್ರೋಲ್ ಬಂಕ್ ನಡುವಿನ ರಸ್ತೆಯಲ್ಲಿ ಆಳವಾದ ಕಮರಿ ಬಿದ್ದಿದ್ದು ತಾತ್ಕಾಲಿಕವಾಗಿ ಪ್ರಯಾಣಿಕರು ಒಂದು ಕಡ್ಡಿ ನಿಲ್ಲಿಸಿ ಕೆಂಪು ಬಟ್ಟೆಯೊಂದನ್ನು ಸುತ್ತಿದ್ದಾರೆ.

ಇಲ್ಲವಾದರೆ ಅದೆಷ್ಟೋ ಪ್ರಯಾಣಿಕರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದರು.


ಅಗಲೀಕರಣ ಕಾಮಗಾರಿ ಮಂಜೂರಾಗಿದ್ದರೂ ಸಹ ಒಂದು ಕೋಮಿನ ಒಳಿತಿಗಾಗಿ ಅಗಲೀಕರಣ ಮಾಡದೇ ಲಕ್ಷಾಂತರ ಪ್ರಯಾಣಿಕರ ಜೀವದ ಜೊತೆ ಇಲಾಖೆಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಚಲ್ಲಾಟವಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.


ಸಾತನೂರು ವೃತ್ತದಿಂದ ಮಹದೇಶ್ವರ ದೇವಾಲಯದ ತನಕ ಅದರಲ್ಲೂ ಸಾತನೂರು ವೃತ್ತದಿಂದ ಪುನೀತಾ ವೈನ್ ಸ್ಟೋರ್ ವರೆಗೆ ಅಧಿಕ ಜನಜಂಗುಳಿಯಿದ್ದು, ರಸ್ತೆ ಅಗಲೀಕರಣ ಮಾಡದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ವಿಶೇಷ ಲೋಕೋಪಯೋಗಿ ವಿಭಾಗದ ವ್ಯಾಪ್ತಿಗೆ ರಸ್ತೆಯ ಕಾಮಗಾರಿ ಬರುತ್ತದೆಯಾದರೂ ಕ್ರಮ ಕೈಗೊಳ್ಳದೆ ಪ್ರಯಾಣಿಕರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑