Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

Posted Date: 17 Feb, 2020

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

ಚನ್ನಪಟ್ಟಣ:ಫೆ/೧೭/೨೦/ಸೋಮವಾರ.


ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಣ್ಣ ನೀರಾವರಿ ಇಲಾಖೆಯ ಎ ಇ, ಎಇಇಗೆ ಕರೆ ಮಾಡಿ ಸಭೆಗೆ ಕರೆದ ಅಧ್ಯಕ್ಷರು, ಸಬೂಬು ಹೇಳಿದ್ದಕ್ಕೆ ಕೆಂಡಾಮಂಡಲವಾದರು. ಕೂಡ್ಲೂರು ಗ್ರಾಮದಲ್ಲಿ ನಾವು ಹೇಳಿದ ಕಡೆ ಚೆಕ್ ಡ್ಯಾಂ ಕಟ್ಟದೆ ಬೇರೆ ಕಡೆ ಕಟ್ಟಿ ನೀರು ನಿಂತಿದೆ. ನಾಲ್ಕು ಬಾರಿ ಹೇಳಿದರೂ ಬಗೆಹರಿಸಿಲ್ಲ ಎಂದು ಫೋನ್‌ನಲ್ಲೇ ತರಾಟೆಗೆ ತೆಗೆದುಕೊಂಡರು.


ಕೋ ಆಪರೇಟಿವ್ ಬ್ಯಾಂಕ್ ಕಳೆದ ನಾಲ್ಕು ವರ್ಷಗಳಿಂದ ಕೇವಲ ನಾಲ್ಕೈದು ಮಂದಿಗೆ ಮಾತ್ರ ತಾಲ್ಲೂಕು ಪಂಚಾಯತಿ ಅನುದಾನ ಹೋಗುತ್ತಿದೆ, ಸಂಬಂಧಿಸಿದವರನ್ನು ಸಭೆಗೆ ಕರೆದರೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಯಾವುದೇ ಇಲಾಖೆಯೇ ಆಗಲಿ ಸರ್ಕಾರದಿಂದ ಬಂದ ಅನುದಾನ ವಾಪಸ್ ಹೋಗಬಾರದು, ಇಲಾಖೆಯ ಬೇರೆ ಕೆಲಸಕ್ಕೆ, ಮೂಲಭೂತ ಸೌಕರ್ಯಗಳಿಗೆ ಬಳಸಿಕೊಳ್ಳಿ, ಎಂದು ತಾಲ್ಲೂಕು ವೈದ್ಯಾಧಿಕಾರಿ, ಡಾ ರಾಜು ಇಲಾಖೆಯ ಬಗ್ಗೆ ಮಾತನಾಡುವ ವೇಳೆ ಅಧ್ಯಕ್ಷರು ಈ ಸಲಹೆ ನೀಡಿದರು.

ಜಿಲ್ಲೆಯಿಂದ ಚೀನಾಗೆ ಪ್ರವಾಸ ಹೋಗಿ ಬಂದ ನಾಲ್ಕು ಜನರ ಗುರುತು ಹಚ್ಚಿದ್ದು ಅವರಿಗೆ ಸೋಂಕು ತಗುಲಿಲ್ಲ, ಎಂದು ಡಾ. ರಾಜು ಅವರು ವಿವರಿಸಿ ದರು.


ರೇಷ್ಮೆ ಇಲಾಖೆಯಿಂದ ಬೈವೋಲ್ಟೋನ್ ಗೂಡಿಗೆ ಉತ್ತೇಜನ ನೀಡುತ್ತಿದ್ದು, ರೈತರಿಗೆ ತರಬೇತಿ ನೀಡಿ ಲಾಭದಾಯಕದತ್ತ ಕೊಂಡೊಯ್ಯಲಾಗುತ್ತಿದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿ ವಿವರಿಸಿದರು. ಆಗ ಅಧ್ಯಕ್ಷರು ಪ್ರತಿಕ್ರಿಯಿಸಿ, ಯಾವುದೇ ಇಲಾಖೆಯ ಅನುದಾನವನ್ನು ಫಲಾ ನುಭವಿಗಳಿಗೆ  ಬಿಡುಗಡೆ ಮಾಡುವ ಮೊದಲು ತಾ ಪಂ ಗಮನಕ್ಕೆ ತನ್ನಿ ಎಂದು ಸೂಚಿಸಿದರು.

ಅಂತರ್ಜಾತಿ ವಿವಾಹಗ ಳಿಗೆ ಕೊಟ್ಟಿರುವ ಹಣದ ಬಗ್ಗೆ , ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗ ಳಿಗೆ ತರಾಟೆಗೆ ತೆಗೆದು ಕೊಂಡ ಅಧ್ಯಕ್ಷರು, ಅದರಲ್ಲಿ ಎಷ್ಟು ಪ್ರಗತಿಯಾಗಿದೆ, ವಿವರಿಸಿ ಎಂದು ಹೇಳಿದರು.

ಟ್ರೆಸರಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಕೊಡುಕೊಳ್ಳುವಿಕೆಯ ಬಗ್ಗೆ ಅಧಿಕಾರಿಗಳ ತಿಕ್ಕಾಟ, ಬಗೆ ಹರಿಸಿಕೊಳ್ಳುವಂತೆ ರಾಜಣ್ಣ ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪೂರಕ ತಯಾರಿ, ಮಕ್ಕಳಿಗೆ ಪರೀಕ್ಷೆ ಬರೆ ಯಲು ಪೂರ್ವ ತಯಾರಿ. ೧೭ ಸಾವಿರ ಮಕ್ಕಳಿಗೆ ಬಿಸಿಯೂಟ ಕೊಡುತ್ತಿರು ವುದು ಪ್ರೌಢಶಾಲೆಗಳಿಗೆ ಶಿಕ್ಷಕರ ಕೊರತೆ  ಕುರಿತಾಗಿ ಬಿಇಓ ಸಭೆಯ ಗಮನಕ್ಕೆ ತಂದರು.


ಸಂಘದಿಂದ ಮೀನು ಸಾಕಾಣಿಕೆಗೆ ಕೆರೆ ಗುತ್ತಿಗೆ ಪಡೆದವರು, ಕೆರೆಯ ಸ್ವಚ್ಚತೆ ಬಗ್ಗೆ ಗಮನ ನೀಡಬೇಕು. ಲಾಭ ಮಾಡಿಕೊಂಡ ಸಹಕಾರ ಸಂಘಗಳು ಸಾಮಾಜಿಕ ಕೆಲಸಕ್ಕಾಗಿ ಎಷ್ಟು ಹಣ ಉಪಯೋಗಿಸಿದ್ದಾರೆ. ಯಾವುದನ್ನೂ ಮಾಡದ ವ್ಯಕ್ತಿಗಳಿಗೆ ಯಾಕೆ ಪದೆಪದೇ ಕೆರೆ ಕೊಡುತ್ತೀರಿ, ಕಂಡೀಷನ್ ಹಾಕಿ ಕೊಡಿ. ತಾಲ್ಲೂಕಿನ ಮೀನುಗಾರರ ಸಹಕಾರ ಸಂಘ ಜಾತಿಗೆ ಸೀಮಿತವಾಗದೆ ಕಸುಬು ಮಾಡುವ ಯಾರು ಬೇಕಾದರೂ ಸದಸ್ಯತ್ವ ಪಡೆದು ಕೆರೆ ಪಡೆದುಕೊಳ್ಳಬಹುದು ಎಂದು ಕಾನೂನು ರೂಪಿ ಸಲು ಸಲಹೆ ನೀಡಿದರು, ಇಲಾಖೆಯಿಂದ ನಗರದಲ್ಲಿ ತಾಜಾ ಮೀನು ಮಾರಾಟ ಮಳಿಗೆ ತೆರೆಯಿರಿ ಎಂದರು.


ಖಾಸಗಿ ಶಾಲೆಗಳಿಗೆ ರಿನ್ಯೂವಲ್ ನೀಡಬೇಕಾದರೆ ಪಂಚಾಯತಿ ಯಿಂದ ಎನ್ ಓ ಸಿ ತಂದರೆ ನೀಡಿ. ಪಂಚಾಯತಿಗೆ ಟ್ಯಾಕ್ಸ್ ಕಟ್ಟುತ್ತಿಲ್ಲ ಎಂದು ಬಿಇಓಗೆ ಸೂಚಿಸಿದರು.

ಶಾಲೆಗಳಿಂದ ಶಾಲೆಗಳಿಗೆ ಅಂತರವಿಲ್ಲ, ಖಾಸಗಿ ಶಾಲೆಗಳ ಸ್ಕೂಲ್ ಡೇ ರಾತ್ರಿ ಹತ್ತು ಗಂಟೆಯಾದರೂ ಅಧಿಕಾರಿಗಳು ಮತ್ತು ಇನ್ನಿತರ ಪ್ರಮುಖ ಶಿಕ್ಷಕರು ಹೋಗಿ ಹೊಗಳಿ ಬರುತ್ತಾರೆ, ಪೋಷಕರ ಮತ್ತು ಸರ್ಕಾರಿ ಶಾಲೆಗಳ ಗತಿ ಏನು ಎಂದು ಬಿಇಓರವ ರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.


ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಯಾವಾಗಲೂ ಸರ್ವರ್ ಡೌನ್, ಕಂಪ್ಯೂ ಟರ್ ಪ್ರಾಬ್ಲಂ, ಬಿಲ್ಡಿಂಗ್ ಕಟ್ಟಲು ಜಾಗ ಇದ್ದರೂ ಕಟ್ಟದೆ ಮೀನಮೇಷ, ಸಾಮಾಜಿಕ ಅರಣ್ಯ ಇಲಾಖೆಯವರು ಗಿಡ ನೆಡುತ್ತಾರೆ, ಆದರೆ ಬೆಳೆಸಲು ನೀರು ಹಾಕುತ್ತಿಲ್ಲ,  ಪಂಚಾಯತಿ ವ್ಯಾಪ್ತಿಯಲ್ಲಿ ಅಂಗವಿಕಲರನ್ನು ಗುರುತಿಸಿ ನೀರು ಹಾಕಲು, ಕಾಯ್ದುಕೊಳ್ಳಲು ಸಂಬಳ ನೀಡಿ ಅವಕಾಶ ಮಾಡಿಕೊಡಿ. ಕಾಂಪೌಂಡ್ ಇರುವ ಶಾಲೆ ಮತ್ತು ಅಂಗನವಾಡಿ ಯಲ್ಲಿ ಹಣ್ಣಿನ ಗಿಡ ನೆಡಿ ಎಂದು ಸಲಹೆ ನೀಡಿದರು.


ಅಬಕಾರಿ ಇಲಾಖೆಯವರು ಮಾಡಬೇಕಾದ ರೈಡ್ ತಹಶೀಲ್ದಾರ್ ಮಾಡುತ್ತಿದ್ದಾರೆ, ನಿಮಗೆ ಕಡಿವಾಣ ಹಾಕಲು ಆಗುವುದಿಲ್ಲ, ಪ್ರತಿ ಪಂಚಾಯತಿ ವ್ಯಾಪ್ತಿ ಯಲ್ಲಿ ಎಂಎಸ್‌ಐಎಲ್ ತೆರೆಯಿರಿ, ಇಬ್ಬರಿಗೆ ಉದ್ಯೋಗ ಸಿಗುತ್ತೆ ಎಂದು ಹೀಗೆ ಅನೇಕ ಸಮಸ್ಯೆಗಳ ಕುರಿತು ಅಧ್ಯಕ್ಷರು ಪ್ರಸ್ತಾಪ ಮಾಡಿದರು.

ನಮ್ಮ ಇಲಾಖೆಗೆ ಜಾಗ ವಿಲ್ಲದೆ ಬಾಡಿಗೆ ಕಟ್ಟಡದ ಲ್ಲಿದ್ದು ಜಾಗ ನೀಡುವಂತೆ ಅಬಕಾರಿ ಅಧಿಕಾರಿ ರಾಜೇಂದ್ರ ಮನವಿ ಮಾಡಿದರು.


ತೋಟಗಾರಿಕೆ, ಅಕ್ಷರ ದಾಸೋಹ, ಪಶು ಇಲಾ ಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಇನ್ನು ಮೇಲೆ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಿರಲು  ಖಡಕ್ ಆಗಿ ಸೂಚಿಸಿದರು.

ಸಭೆ ಹನ್ನೊಂದು ಗಂಟೆಗೆ ಕರೆಯಲಾಗಿತ್ತು, ಹನ್ನೆರಡು ಗಂಟೆಯಾದರು,  ೩೨ ಇಲಾಖೆಯ ಪೈಕಿ ಬಂದಿದ್ದು ೧೬ ಇಲಾಖೆಯ ಅಧಿಕಾರಿಗಳು ಮಾತ್ರ.

ಸಭೆಯಲ್ಲಿ ಇ.ಓ ಶ್ರೀ ಚಂದ್ರು, ಸ್ಥಾಯಿಸಮಿತಿ ಅಧ್ಯಕ್ಷ ಸುರೇಶ್, ಸಹಾಯಕ ನಿರ್ದೇಶಕ ಲೋಕೇಶ್ ಇನ್ನಿತರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑