Tel: 7676775624 | Mail: info@yellowandred.in

Language: EN KAN

    Follow us :


ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್

Posted Date: 31 Mar, 2020

ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್

ಗೋದಾಮಾಗಿ ಪರಿವರ್ತನೆಯಾದ ಶಾಲೆ

ನಗರದ ಎಲೆಕೇರಿ ಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತಾಲ್ಲೂಕು ಆಡಳಿತವೂ ವಶಕ್ಕೆ ಪಡೆದಿದ್ದು, ಕೊರೊನಾ ವೈರಸ್ ನಿಂದ ಊಟಕ್ಕಾಗಿ ಪರದಾಡುತ್ತಿರುವ ಕೂಲಿ ಕಾರ್ಮಿಕರಿಗೆ ನೀಡಲು ದಾನಿಗಳು ಉದಾರವಾಗಿ ನೀಡುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಕಾದಿರಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ರವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಇನ್ನೂ ಕೆಲ ಅಧಿಕಾರಿಗಳ ತಂಡವನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.


ದಾನಿಗಳಿಂದ ಆಹಾರ ಪದಾರ್ಥಗಳನ್ನು ಶೇಖರಿಸಲು ಅವರ ಅನುಗುಣಸಾರವಾಗಿ ಆಹಾರ ಪದಾರ್ಥಗಳನ್ನು ನೀಡಬೇಕೆಂದು ತಹಶಿಲ್ದಾರ್ ಸುದರ್ಶನ್ ರವರು ಸಾರ್ವಜನಿಕರಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.


*ಕೋವಿಡ್-೧೯ ಗೆ ತಾತ್ಕಾಲಿಕ ವಿಶೇಷ ಆರೋಗ್ಯ ಕೇಂದ್ರ*


ನಗರದ ಇಪ್ಪತೈದನೇ ವಾಡ್೯ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಸಜ್ಜಿತಗೊಳಿಸಿದ್ದು, ಯಾವುದೇ ವ್ಯಕ್ತಿಗೆ ಕೊರೊನಾ ದೃಢ ಪಟ್ಟರೆ ಮೊದಲು ಈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಐಸೋಲೇಷನ್ ವಾಡ್೯ಗೆ ಸೇರಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑