Tel: 7676775624 | Mail: info@yellowandred.in

Language: EN KAN

    Follow us :


ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?

Posted Date: 01 Apr, 2020

ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?

ಎಪಿಎಂಸಿ ಮಾರುಕಟ್ಟೆ ತೆರವು

ಚನ್ನಪಟ್ಟಣ:ಏ/೦೧/೨೦/ಬುಧವಾರ. ನಗರದ ಎಪಿಎಂಸಿ ಮಾರುಕಟ್ಟೆ,  ಎಂ ಜಿ ರಸ್ತೆ, ಡಿ ಟಿ ರಾಮು ಸರ್ಕಲ್ ಮತ್ತಿತರ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ, ಹೂವು ಮತ್ತು ಹಣ್ಣು ವ್ಯಾಪಾರ ಮಾಡುತ್ತಿದ್ದ ಬೀದಿಬದಿಯ ವ್ಯಾಪಾರಿಗಳು ಹಾಗೂ ತರಕಾರಿ ಮಾರುಕಟ್ಟೆಯ ಬಳಿಯ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.


ಕೊರೊನಾ ವೈರಸ್ ಬಂದಾಗಿನಿಂದಲೂ ಜನರನ್ನು ಅಂತರ ಕಾಯ್ದುಕೊಳ್ಳುವಂತೆ (ಸೋಷಿಯಲ್‌ ಡಿಸ್ಟೆನ್ಸ್) ಮನವಿ ಮಾಡಿದರೂ ಸಹ ಬಗ್ಗದ ಮಂದಿಗೆ ಇಂದು ಚುರುಕು ಮುಟ್ಟಿಸಿ ತೆರವುಗೊಳಿಸಲಾಯಿತು.


ನಿಮ್ಮ ತಳ್ಳುವ ಗಾಡಿಗಳಲ್ಲಿ ಬೀದಿಬೀದಿಗಳಿಗೆ ಹೋಗಿ ಮಾರಾಟ ಮಾಡಿ. ಇಲ್ಲಿಯೂ ಸಹ ಗುಂಪುಗೂಡಲು ಅವಕಾಶ ಮಾಡಿಕೊಡದೆ ಅಂತರ ಕಾಯ್ದುಕೊಂಡು ದಿನನಿತ್ಯದ ವಸ್ತುಗಳನ್ನು ಮಾರಿ ಎಂದು ಸಲಹೆ ನೀಡಲಾಯಿತು.


*ಸ್ವಚ್ಚತೆ ಇಲ್ಲದೆ ತಲೆ ಎತ್ತಿದ ಮಾಂಸದಂಗಡಿಗಳು*

ರಸ್ತೆಯ ಬೀದಿಬದಿಗಳಲ್ಲಿ ಮಾರುವ ತರಕಾರಿ ಅಂಗಡಿಗಳನ್ನು ತೆರವುಗೊಳಿಸಿ ಮಾಂಸದಂಗಡಿಗಳು, ಕೋಳಿ ಮಾಂಸದಂಗಡಿಗಳು ಮತ್ತು ಮೀನು ಮಾರಾಟದ ಅಂಗಡಿಗಳನ್ನು ಮುಕ್ತವಾಗಿ ಬಿಟ್ಟಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.


ಕರ್ನಾಟಕ ಲಾಕ್ ಡೌನ್ ನಂತರ ಇಂದು ಹೆಚ್ಚು ಮಾಂಸದಂಗಡಿಗಳು ತೆರೆದಿದ್ದು ಸ್ವಚ್ಚತೆ ಎನ್ನುವುದು ಮಾಯವಾಗಿ, ರೋಗಕ್ಕೆ ಮುಕ್ತ ಅವಕಾಶ ನೀಡಿದಂತಾಗಿದೆ. ಕನಿಷ್ಠ ಪ್ಲಾಸ್ಟಿಕ್ ಹೊದಿಕೆಯನ್ನೂ ಸಹ ಕಟ್ಟದೆ ಕೊಯ್ದು ನೇತು ಹಾಕಿದ್ದು ಲಾಕ್ ಡೌನ್ ಯಾವ ಪುರುಷಾರ್ಥಕ್ಕೆ ಎಂಬುದು ಸಾರ್ವಜನಿಕರ ವ್ಯಂಗ್ಯ ಭರಿತ ಆಕ್ರೋಶವಾಗಿದೆ.


ಲಕ್ಷ್ಮಿ ಟಾಕೀಸ್ (ಮೂರ್ತಿಮಹಲ್) ರಸ್ತೆ, ತುಳಸಿ ಬೀದಿ, ಕೆಲ ಮುಸ್ಲಿಂ ವಾಡ್೯ಗಳು, ಸಾತನೂರು ರಸ್ತೆ ಮತ್ತು ನಿಜಾಮಿ ವೃತ್ತದ ಮೀನಿನ ಅಂಗಡಿಗಳು ಸಂಪೂರ್ಣ ತೆರೆದಿದ್ದು ಸಂಬಂಧಿಸಿದ ಅಧಿಕಾರಿಗಳು ಸಬೂಬು ಹೇಳದೆ ಕನಿಷ್ಠ ಸ್ವಚ್ಚತೆಯನ್ನಾದರೂ ಕಾಪಾಡಲು ಮಾರ್ಗಸೂಚಿ ನೀಡಿ ಕರೋನಾ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಿ.


ಪುಟ್ ಪಾತ್ ತೆರವು ವೇಳೆ ತಹಶಿಲ್ದಾರ್ ಸುದರ್ಶನ್, ಪೌರಾಯುಕ್ತ ಶಿವನಂಕಾರಿಗೌಡ, ನಗರಸಭೆಯ ಆರೋಗ್ಯ ಅಧಿಕಾರಿ ವರಲಕ್ಷ್ಮಿ ಮತ್ತು ಪೋಲಿಸರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑