Tel: 7676775624 | Mail: info@yellowandred.in

Language: EN KAN

    Follow us :


ಹೆಚ್ಚಿನ ಬೆಲೆಯಲ್ಲಿ ಮಾಸ್ಕ್ ಮಾರಾಟ: ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಗೆ ೫ ಸಾವಿರ ರೂ.ಗಳ ದಂಡ

Posted Date: 04 Apr, 2020

ಹೆಚ್ಚಿನ ಬೆಲೆಯಲ್ಲಿ ಮಾಸ್ಕ್ ಮಾರಾಟ: ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಗೆ ೫ ಸಾವಿರ ರೂ.ಗಳ ದಂಡ

ರಾಮನಗರ:ಏ/೦೩/೨೦/ಶುಕ್ರವಾರ. ರಾಮನಗರದ ಐಜೂರಿನ ಪಿ.ಎಲ್.ಡಿ. ಬ್ಯಾಂಕ್ ಬಳಿಯಿರುವ ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ ಅವರು ಹೆಚ್ಚಿನ ಬೆಲೆಗೆ ಮುಖಗವಸು (ಮಾಸ್ಕ್)ಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಟ್ಟಣ ಸಾಮಗ್ರಿಗಳ ಕಾಯ್ದೆ ೨೦೧೧ ರ ಪ್ರಕಾರ ನಿಯಮ (೧೮/೨) ನಿಯಮ (೩೨) ರ ಅನ್ವಯ ಮೊಕದ್ದಮೆ ದಾಖಲಿಸಿ ಸ್ಥಳದಲ್ಲೇ ೫,೦೦೦ ರೂ.ಗಳ ದಂಡ ವಿಧಿಸಲಾಗಿದೆ ಎಂದು ರಾಮನಗರ ಉಪವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರಾದ ಉದಯ್ ಸಿಂಗ್ ಅವರು ತಿಳಿಸಿದ್ದಾರೆ.


ಏಪ್ರಿಲ್ ೦೧ ರಂದು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿಗೆ ಶ್ರೀ ಲಕ್ಷ್ಮಿ ಮೆಡಿಕಲ್ಸ್ ಅಂಡ್ ಸ್ಟೋರ್ ಇವರು ಹೆಚ್ಚಿನ ಬಲೆಗೆ ಮಾಸ್ಕ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ರಾಮನಗರ ಉಪವಿಭಾಗದ ಕಾನೂನು ಮಾಪನ ಶಾಸ್ತ್ರ ನಿರೀಕ್ಷರು ತಮ್ಮ ಸಿಬ್ಬಂದಿ ಯೊಂದಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಮಾಡಿದಾಗ ಮಾಸ್ಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ೫೦೦೦ ರೂ.ಗಳ ದಂಡ ವಿಧಿಸಲಾಗಿದೆ ಎಂದು ಕಾನೂನು ಮಾಪನಾ ಶಾಸ್ತ್ರ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑