Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೧೩ ಸೇರಿ ೩,೦೧೫ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

Posted Date: 19 May, 2020

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೧೩ ಸೇರಿ ೩,೦೧೫ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೧೯/೨೦/ಮಂಗಳವಾರ. ರಾಮನಗರ ಜಿಲ್ಲೆಯ ಕೊರನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಂಗಳವಾರ (ದಿ.೧೯) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.

  

ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೩,೦೧೫ (ಹೊಸದಾಗಿ ಇಂದಿನ ೧೧೩ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೫೨೦ ಜನ (ಹೊಸದಾಗಿ ಇಂದು ೦೦), ೧೪ ದಿನಗಳ ನಿಗಾ ಅವಧಿ ಪೂರೈಸಿದವರು ೧,೦೩೧ (ಹೊಸದಾಗಿ ಇಂದು ೩೨೩ ಜನ).  ಜನ, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ: ೧,೦೧೪ ಜನ (ಹೊಸದಾಗಿ ಇಂದಿನ ೮೧ ಜನ) ಜನರಿರುವುದಾಗಿ ತಿಳಿಸಿದ್ದಾರೆ.


ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಗಾದವರ ಸಂಖ್ಯೆ -೧,೨೮೪ (ಇಂದು-೨೦ ಸೇರಿದಂತೆ) ಜನ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ ೦೩ (ಹೊಸದಾಗಿ ಇಂದು ೦೧), ಇನ್ಸಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರುವವರ ಸಂಖ್ಯೆ ೩೨೧ ಜನ (ಹೊಸದಾಗಿ ಇಂದು ೨೭). ರಿದ್ದಾರೆ.


ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ ೨,೮೨೮ (ಹೊಸದಾಗಿ ಇಂದಿನ ೧೩೦ ಸೇರಿ) ೨,೫೪೮ ಮಾದರಿಗಳು. ನಕಾರಾತ್ಮಕವಾಗಿವೆ (ನೆಗಟಿವ್) ಎಂದು ವರದಿಯಾದ ಸಂಖ್ಯೆ  (ಇಂದು -೧೧೧), ಪಾಸಿಟಿವ್ ವರದಿಯ ಸಂಖ್ಯೆ-೦೦ ಮತ್ತು ವರದಿ ಬರಲು ಬಾಕಿ ಇರುವ ಸಂಖ್ಯೆ ೨೮೦ (ಇಂದಿನ ೧೩೦ ಸೇರಿ) ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑