Tel: 7676775624 | Mail: info@yellowandred.in

Language: EN KAN

    Follow us :


ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಧನ ಮತ್ತು ಆಹಾರ ಕಿಟ್ ವಿತರಿಸಿದ ಜಯಮುತ್ತು

Posted Date: 20 May, 2020

ಬಮೂಲ್ ನಿಂದ ಆಶಾ ಕಾರ್ಯಕರ್ತೆಯರಿಗೆ ಧನ ಮತ್ತು ಆಹಾರ ಕಿಟ್ ವಿತರಿಸಿದ ಜಯಮುತ್ತು

ಚನ್ನಪಟ್ಟಣ:ಮೇ/೨೦/೨೦/ಬುಧವಾರ. ಬಮೂಲ್ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ೧೯೬ ಜನ ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂಪಾಯಿಗಳ ಚೆಕ್‌ ಅನ್ನು ಬಮೂಲ್‌ನ ಚನ್ನಪಟ್ಟಣ ತಾಲ್ಲೂಕು ನಿರ್ದೇಶಕ ಜಯಮುತ್ತು ಅವರು ಇಂದು ಇಲ್ಲಿನ ಬಮೂಲ್ ಕಛೇರಿಯಲ್ಲಿ ವಿತರಣೆ ಮಾಡಿದರು.


ಜೊತೆಗೆ ಪ್ರಶಸ್ತಿ ಪತ್ರ, ಕೈಗಡಿಯಾರ ಹಾಗೂ ರೇಷನ್ ಕಿಟ್‌ಗಳನ್ನು ವಿತರಿಸಲಾಯ್ತು. ಸಂದರ್ಭದಲ್ಲಿ ಮಾತನಾಡಿದ ಜಯಮುತ್ತು ಅವರು, ನೀವು ನಮ್ಮ ಜನರ ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ಪರಿಶ್ರಮ ಮಾಡಿದ್ದೀರಿ. ನಿಮ್ಮ ಸೇವೆ ಸ್ಮರಣಾರ್ಹವಾದುದು ಎಂದರು.


ಕೊರೊನಾ ಆಘಾತಕಾರಿ ರೋಗವಾಗಿದ್ದು, ಅದನ್ನು ಮಣಿಸಲು ನೀವು ಪಟ್ಟ ಶ್ರಮಕ್ಕೆ ನಾವು ಕೊಡುತ್ತಿರುವ ಹಣವಾಗಲಿ, ಆಹಾರದಾನ್ಯವಾಗಲಿ ಸಾಟಿಯಲ್ಲ. ನಿಮ್ಮ ಸೇವೆ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹೇಳಿ ನೀವು ಮಾಡಿದ ಸೇವೆಯನ್ನು ನಾವು ಸದಾಕಾಲ ಸ್ಮರಿಸಿಕೊಳ್ಳುತ್ತೇವೆ ಎಂದರು.


ಈ ಸಂದರ್ಭದಲ್ಲಿ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ, ಉಪ ವ್ಯವಸ್ಥಾಪಕರಾದ ಕೆಂಪರಾಜು, ಚಂದ್ರಪ್ಪ, ವಿಸ್ತರಣಾಧಿಕಾರಿಗಳಾದ ಶಿವಪ್ರಸನ್ನ, ಪ್ರತಿನ ಕುಮಾರ್, ಹೊನ್ನಪ್ಪ, ಪೂಜಾರಿ ಶ್ರೀಧರ್, ನಂದಿತಾ, ಅನಿಲ್ ಮುಖ್ಯ ಕಾರ್ಯನಿರ್ವಾಹಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪುಟ್ಟೇಗೌಡ ರವರು ಪದಾಧಿಕಾರಿಗಳಾದ ಲಕ್ಷ್ಮಮ್ಮ, ದೇವರಾಜ್, ರವಿಕುಮಾರ್, ಕಿರಣ್ ದೇವರಾಜು, ಪಟ್ಲು  ಬಿಳಿಯಪ್ಪ, ಕೃಷ್ಣ, ರಮೇಶ್ ಹಾಗೂ ಮುಖಂಡರುಗಳು ಮತ್ತು ಇತರೆ ಅಧಿಕಾರಿಗಳು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑