Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೩ ಸೇರಿ, ೩೧೬೩ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

Posted Date: 21 May, 2020

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೩ ಸೇರಿ, ೩೧೬೩ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೨೧/೨೦/ಗುರುವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಗುರುವಾರ (ದಿ. ೨೧) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.

  

ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೩,೧೬೩ (ಹೊಸದಾಗಿ ಇಂದಿನ ೬೩ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೮೨೬ ಜನ (ಹೊಸದಾಗಿ ಇಂದು ೩೦೬), ೧೪ ದಿನಗಳ ನಿಗಾ ಅವಧಿ ಪೂರೈಸಿದವರು ೯೨೩ (ಹೊಸದಾಗಿ ಇಂದು ೧೯೮ ಜನ). ಜನ, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ: ೯೬೫ ಜನ (ಹೊಸದಾಗಿ ಇಂದಿನ ೪೯ ಜನ) ಜನರಿರುವುದಾಗಿ ತಿಳಿಸಿದ್ದಾರೆ.


ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಗಾದವರ ಸಂಖ್ಯೆ – ೧೩೬೩ (ಇಂದು-೩೦ ಸೇರಿದಂತೆ) ಜನ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ ೧೫ (ಹೊಸದಾಗಿ ಇಂದು ೦೫), ಇನ್ಸಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರುವವರ ಸಂಖ್ಯೆ ೩೧೨ ಜನ (ಹೊಸದಾಗಿ ಇಂದು ೦೯). ರಿದ್ದಾರೆ.

ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ ೩,೦೧೮ (ಹೊಸದಾಗಿ ಇಂದಿನ ೯೩ ಸೇರಿ) ಮಾದರಿಗಳು. ನಕಾರಾತ್ಮಕವಾಗಿವೆ (ನೆಗಟಿವ್) ಎಂದು ವರದಿಯಾದ ಸಂಖ್ಯೆ ೨,೮೪೭ (ಇಂದು -೧೧೩), ಪಾಸಿಟಿವ್ ವರದಿಯ ಸಂಖ್ಯೆ-೦ ಮತ್ತು ವರದಿ ಬರಲು ಬಾಕಿ ಇರುವ ಸಂಖ್ಯೆ ೨೭೧ (ಇಂದಿನ ೯೩ ಸೇರಿ) ಆಗಿದೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑