Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

Posted Date: 22 May, 2020

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

 

ಶುಭಕರವಾದ ಅಷ್ಟ ವಸ್ತುಗಳಲ್ಲಿ ವೀಳೆದೆಲೆಯೂ ಸಹ ಒಂದು ಎಂದು ನಮ್ಮ ಸಂಪ್ರದಾಯವು ತಿಳಿಸುತ್ತಿದೆ. ವೀಳೆದೆಲೆ ಇಂತಹ ಶುಭ ಲಕ್ಷಣವನ್ನು ಹೊಂದಿರುವುದರಲ್ಲಿ ಆನೇಕ ದೇವತೆಗಳ ಗುಣವನ್ನು ಅಡಗಿಸಿಕೊಂಡಿದೆ. *ವೀಳೆದೆಲೆಯ ಮೊದಲಲ್ಲಿ ಲಕ್ಷ್ಮೀದೇವಿ, ಮಧ್ಯ ಭಾಗದಲ್ಲಿ ಸರಸ್ವತಿ ಹಾಗೂ ಜೇಷ್ಠಭಗವತಿ ಕೊನೆಯ ಭಾಗದಲ್ಲಿ ನೆಲೆಸಿರುವರೆಂಬ ಒಂದು ನಂಬಿಕೆ. ಈ ಎಲೆಯ ಎಡಭಾಗದಲ್ಲಿ ಪಾರ್ವತಿಮಾತೆ, ಬಲಭಾಗದಲ್ಲಿ  ಭೂದೇವಿ, ಮುಂದಿನ ಭಾಗದಲ್ಲಿ ಶಿವನು ಎಲೆಯ ಪೂರ್ತಿಯಾಗಿ ಮೇಲ್ಭಾಗದಲ್ಲಿ ವಿಷ್ಣುದೇವರು ತಮ್ಮ ತಮ್ಮ ಸ್ಥಾನಗಳನ್ನು ಹೊಂದಿರುವರೆಂಬ ನಂಬಿಕೆ. ಈ ದೇವತೆಗಳೇ ಅಲ್ಲದೆ ಶುಕ್ರನು, ಇಂದ್ರನು, ಸೂರ್ಯನು ಹಾಗೂ ಕಾಮದೇವನೂ ಸಹ ವೀಳೆದೆಲೆಯ ಮೇಲೆ ವಿವಿಧ ಭಾಗಗಳಲ್ಲಿ ಅವರವರ ಸ್ಥಾನಗಳಲ್ಲಿ ಇರುವರೆಂದು ನಮ್ಮ ಶಾಸ್ತ್ರಗಳು ಹೇಳುತ್ತಿವೆ.* ವಾಸ್ತವವಾಗಿ ಈ ವಿವಿಧ ದೇವತೆಗಳು ವೀಳೆದೆಲೆಯ ಅನೇಕ ಶುಭಗುಣಗಳ ತತ್ವಗಳನ್ನು ವ್ಯಕ್ತಪಡಿಸುತ್ತಿದ್ದಾರೆ.


ಈ ಕಾರಣದಿಂದಲೇ ವೀಳೆದೆಲೆಯ ವಿನಿಯೋಗವನ್ನು ವಿವಿಧ ವಿಧಗಳಾಗಿ ಉಪಯೋಗಿಸುವ ಹಾಗೆ ನಮ್ಮ ಹಿರಿಯರು ಶಾಸ್ತ್ರಗಳನ್ನು ರಚಿಸಿರುವರು. ಎಲೆ ಒಣಗಿ ಹೋದರೂ, ರಂಧ್ರ ಬಿದ್ದಿದ್ದರೂ, ಹರಿದು ಹೋಗಿದ್ದರೂ, ಸುಕ್ಕಾಗಿದ್ದರೂ ಸಹ ಈ ಎಲೆಗಳನ್ನು ಉಪಯೋಗಿಸಬಾರದೆಂದು ತಿಳಿಸಿರುವರು. *ವೀಳೆದೆಲೆಯನ್ನು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿಸಮಯದಲ್ಲಿ ಸೇವಿಸುವುದು ಒಳ್ಳೆಯದೆಂದು ತಿಳಿಸಲಾಗಿದೆ.* ಆದರೆ  ಉಪವಾಸ ದೀಕ್ಷೆಯಲ್ಲಿ ಇರುವ ದಿನಗಳಲ್ಲಿ ಮಾತ್ರ ವೀಳೆದೆಲೆಯನ್ನು ನಿಲ್ಲಿಸಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑