Tel: 7676775624 | Mail: info@yellowandred.in

Language: EN KAN

    Follow us :


ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

Posted Date: 29 Jun, 2020

ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

ರಾಮನಗರ:ಜೂ/೨೮/೨೦/ಭಾನುವಾರ. ಕೊರೊನಾ (ಕೋವಿಡ್-೧೯) ನ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ,  ಹೊರಗೆ ಓಡಾಡುತ್ತಿದ್ದ ಜಿಲ್ಲೆಯ ಎಂಟು ಮಂದಿಯ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ರಾಮನಗರ ಮತ್ತು ಕನಕಪುರ ತಾಲೂಕು ಆಡಳಿತ ತಿಳಿಸಿದೆ.


ನಿಯಮಗಳನ್ನು ಉಲ್ಲಂಘಿಸಿದ ರಾಮನಗರ ತಾಲೂಕಿನ ಮತ್ತು ಕನಕಪುರ ತಾಲೂಕಿನ ತಲಾ ನಾಲ್ಕು ಮಂದಿಯ ಮೇಲೆ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ಆಯಾ ತಾಲೂಕು ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಹೋಂ ಕ್ವಾರಂಟಿನ್ ನಲ್ಲಿ ಇರಬೇಕಾದವರು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುವುದು ಮತ್ತು ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗುವುದು ಇಲ್ಲವೇ ಇನ್ನಾರಿಗಾದರೂ ಮೊಬೈಲ್ ಕೊಟ್ಟಂತಹ ಸಂದರ್ಭಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾದರಿ ಮಾರ್ಗಸೂಚಿಗಳನ್ವಯ ಎಫ್.ಐ.ಆರ್ ದಾಖಲಿಸಲಾಗುವುದು.


ಜೊತೆಗೆ ನಿಯಮ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಎಸ್. ಅರ್ಚನಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑