Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಯಲ್ಲಿ ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

Posted Date: 30 Jun, 2020

ರಾಮನಗರ ಜಿಲ್ಲೆಯಲ್ಲಿ  ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

ರಾಮನಗರ::ಜೂ/೩೦/೨೦/ಮಂಗಳವಾರ. ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯)  ೧೯ ಜನರಿಗೆ ಪಾಸಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೬೯ ಕ್ಕೆ ಏರಿಕೆಯಾಗಿ ಜಿಲ್ಲೆಯ ಜನರ ನಿದ್ದೆ ಕೆಡಿಸಿದೆ.


ಮಾಗಡಿ ತಾಲ್ಲೂಕಿನಲ್ಲಿ ೨ ಪ್ರಕರಣಗಳು ಕಂಡುಬಂದಿರುತ್ತದೆ. 


ರಾಮನಗರ ತಾಲ್ಲೂಕಿನಲ್ಲಿ ೫ ಪ್ರಕರಣಗಳು ಕಂಡುಬಂದಿರುತ್ತದೆ. 


ಕನಕಪುರ ತಾಲೂಕಿನಲ್ಲಿ ೪ ಪ್ರಕರಣಗಳು ಕಂಡಿಬಂದಿರುತ್ತದೆ.


ಚನ್ನಪಟ್ಟಣ ತಾಲ್ಲೂಕಿನಲ್ಲಿ ೮ ಪ್ರಕರಣಗಳು ಕಂಡುಬಂದಿರುತ್ತದೆ.

ನಗರದ ಉತ್ತರದ ಐದನೇ ತಿರುವಿನ ಒಬ್ಬರಿಗೆ, ಸಾಯಿಬಾಬಾ ದೇವಾಲಯದ ಹಿಂಭಾಗದ ರಸ್ತೆಯ ಮೂವರಿಗೆ, ಪೋಲಿಸ್ ವಸತಿ ಗೃಹ ದ ಒಬ್ಬರಿಗೆ ಹಾಗೂ ವರದರಾಜ ಸ್ವಾಮಿ ದೇವಾಲಯದ ಬಳಿ ಒಬ್ಬರಿಗೆ ಸೋಂಕು ತಗುಲಿದ್ದು ಇವರೆಲ್ಲರೂ ಸಹ ಪ್ರಥಮ ಸಂಪರ್ಕಿತರಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು. ಇನ್ನೋರ್ವ ಮಹಿಳೆಗೂ ಸೋಂಕು ತಗುಲಿದ್ದು ಈಕೆಯು ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ.


ಇವರನ್ನು ಚಿಕಿತ್ಸೆಗಾಗಿ ರಾಮನಗರದ  ಕೋವಿಡ್  ಆಸ್ಪತ್ರೆಗೆ  ದಾಖಲಿಸಿದೆ. ಚನ್ನಪಟ್ಟಣ ನಗರದಲ್ಲಿ ಒಟ್ಟು ೧೬ ಗ್ರಾಮಾಂತರದಲ್ಲಿ ೨೨ ಸೇರಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೩೮ ಕ್ಕೆ ಏರಿಕೆಯಾಗಿದ್ದು ಜನರ ನಿದ್ದೆ ಕೆಡುವಂತೆ ಮಾಡಿದೆ.


ಐದು ಜನ  ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೭೯ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑