Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ, ದಾನಿಗಳು ರಕ್ತದಾನ ಮಾಡಲು ಮನವಿ.

Posted Date: 14 Jun, 2018

ಚನ್ನಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ, ದಾನಿಗಳು ರಕ್ತದಾನ ಮಾಡಲು ಮನವಿ.

ಸತತ ಆರು ವರ್ಷಗಳಿಂದ ನಗರದ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ಏರ್ಪಡಿಸುತ್ತಾ ಬಂದಿದೆ.

ಅದರ ಮುಂದುವರಿದ ಭಾಗವಾಗಿ ೧೬/೦೬/೧೮ ನೇ ಶನಿವಾರವೂ ಸಹ ಕುವೆಂಪು ನಗರದ ೫ ನೇ ತಿರುವಿನಲ್ಲಿರುವ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಆಯೋಜಕರಾದ ಡಾ ಮಲವೇಗೌಡರು ಮನವಿ ಮಾಡಿದ್ದಾರೆ.


ಇಷ್ಟು ವರ್ಷಗಳು ಸಹ ಬಹುತೇಕ ರಕ್ತದಾನಿಗಳ ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡುತ್ತಿದ್ದರು, ಕಳೆದ ವರ್ಷ ನಗರದ ಪ್ರಖ್ಯಾತ ಕಲ್ಯಾಣಿ ಮೋಟಾರ್ಸ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಭಾಗವಹಿಸಿದ್ದು ರಕ್ತದಾನ ಯಶಸ್ವಿಯಾಗಲು ಕಾರಣವಾಗಿತ್ತು.


ಈ ಬಾರಿಯು ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ತಾಲ್ಲೂಕಿನ ಪ್ರಜ್ಙಾವಂತ ನಾಗರೀಕರು ಬೃಹತ್ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವುದರ ಮೂಲಕ ರಕ್ತಹೀನರಿಗೆ, ಅಪಘಾತ ಗಾಯಾಳುಗಳಿಗೆ, ಹಾಗೂ ನಮ್ಮನ್ನೆಲ್ಲ ಕಣ್ಣಿಟ್ಟು ಕಾಪಾಡುತ್ತಿರುವ ಹೆಮ್ಮೆಯ ಸೈನಿಕರಿಗೆ  ನೆರವಾಗಬೇಕೆಂದು ಮನವಿ ಮಾಡಿದರು.


ಸ್ಥಳ: ಮಾತೃಶ್ರೀ ಆರ್ಥೋಪೆಡಿಕ್ ೫ ನೇ ತಿರುವು, ಕುವೆಂಪು ನಗರ, ಚನ್ನಪಟ್ಟಣ.

ಸಮಯ ೧೬/೦೬/೧೮ ನೇ ಶನಿವಾರ ಬೆಳಿಗ್ಗೆ ೧೦:೦೦ ಗಂಟೆಯಿಂದ ಮಧ್ಯಾಹ್ನ ೨:೦೦ ಗಂಟೆ.


ಸಂಪರ್ಕಿಸಿ.

ಮಾತೃಶ್ರೀ ಆರ್ಥೋಪೆಡಿಕ್ 9844121682.

ಡಾ ಮಲವೇಗೌಡರು: 9448461704.

ಗೋ ರಾ ಶ್ರೀನಿವಾಸ:9845856139.

ಪ್ರತಿಕ್ರಿಯೆಗಳು

  • Patelraju wrote:
    15 Jun, 2018 04:05 pm

    Nice work, congrats

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑