Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಉಚಿತ ಯೋಗಾಸನ

Posted Date: 22 Dec, 2018

ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಉಚಿತ ಯೋಗಾಸನ

ಬೆಂಗಳೂರಿನ ಆಯುಷ್ಮಾ ಯೋಗಾಸನ ಕೇಂದ್ರದ ವತಿಯಿಂದ ನಗರದ ಮಂಗಳವಾರಪೇಟೆಯ ಸರ್ಕಾರಿ ಮಾದರಿ ಮಾಧ್ಯಮಿಕ ಪಾಠಶಾಲೆಯಲ್ಲಿ‌ ಹಮ್ಮಿಕೊಳ್ಳಲಾಗಿತ್ತು.


ಬೆಳಿಗ್ಗೆ ಎಂಟೂವರೆಯಿಂದ ಒಂಭತ್ತೂವರೆ ಗಂಟೆಯವರೆಗೆ ಒಂದು ಗಂಟೆಯ ಕಾಲ ಆಯುಷ್ಮಾ ಯೋಗ ಕೇಂದ್ರದ ಗೀತಾ ಲಕ್ಷ್ಮಣ ಮತ್ತು ಪ್ರದೀಪ್ ಕುಮಾರ್ ರವರು ಎಲ್ಲಾ ವಯೋಮಾನದ ಮಕ್ಕಳಿಗೆ ಹಲವು ರೀತಿಯ ಯೋಗ ಭಂಗಿಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುವ ಮೂಲಕ ಮಕ್ಕಳಿಗೆ ಯೋಗಾಸನ ಕಲಿಸಿಲಾಯಿತು.


ಮಕ್ಕಳು ಉತ್ಸಾಹದಿಂದ ಕಲಿಯುವುಂತೆ ಸೂಕ್ಷ್ಮ ವ್ಯಾಯಾಮ, ಸೂರ್ಯ ನಮಸ್ಕಾರ, ತ್ರಿಕೋಣಾಸನ, ಪಾರ್ಶ್ವಕೋನಾಶನ, ಬದ್ಧಕೋನಾಸನ, ಪಶ್ಚಿಮೋತ್ಥಾಸನ, ಜಾನು ಶೀರ್ಷಾಸನ, ಪ್ರಾಣಾಯಾಮ ಇನ್ನೂ ಮುಂತಾದ ಆಸನಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಟ್ಟು ಪ್ರಶಂಸೆಗೊಳಗಾದರು.


ಇದೇ ವೇಳೆ ತಾಲ್ಲೂಕು ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ಸ್ನೇಹ ಟೊಯೋಟಾ ಸಂಸ್ಥೆ ಕೊಡಮಾಡಿದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.


ಶಾಲೆಯ ಮುಖ್ಯೋಪಾಧ್ಯಾಯ ವಸಂತಕುಮಾರ್, ಬಿ ರೇಣುಕಾ, ಜಿ ಶಾರದಾ, ಶಕುಂತಲಾ, ಕೆ ಬಿ ಗಾಯತ್ರಿ, ನಾಗರತ್ನ, ಯೋಗೇಶ್ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑