Tel: 7676775624 | Mail: info@yellowandred.in

Language: EN KAN

    Follow us :


ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ

Posted Date: 27 Mar, 2019

ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ

ಸ್ನೇಹ ಪುಸ್ತಕದ ಕತೃ, ರೋಟರಿ ಕ್ಲಬ್ ನ ರೊಟೇರಿಯನ್ ಆಗಿದ್ದ ಹಾಗೂ ಪನಸಾರಿ ಅಂಗಡಿ ಎಂದರೆ ಪೇಟೆ ಬೀದಿಯ ಜಗದೀಶ್ ಎಂದು ಹೇಳುವ ಮಟ್ಟಿಗೆ ತಾಲ್ಲೂಕಿನಾದ್ಯಂತ ಚಿರಪರಿಚಿತರಾಗಿದ್ದ ಸಿ ವಿ ಜಗದೀಶ್ (೭೨) ಇಂದು ನಿಧನರಾದರು.


ಎಲ್ಲಾ ವಯೋಮಾನದ ವರನ್ನೂ ಆತ್ಮೀಯ ವಾಗಿ ಮಾತನಾಡಿಸುತಿದ್ದ ಶ್ರೀಮಾನ್‌ ಜಗದೀಶ್ ರವರು ರಸಿಕ ಪುತ್ತಿಗೆ ಹಾಗೂ ಸು ತ ರಾಮೇಗೌಡ ರ ನೇತೃತ್ವದಲ್ಲಿ ನಡೆದ ಅಂದಿನ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದವರಲ್ಲೊಬ್ಬರು.


ಮೃತರು ಇಬ್ಬರೂ ಗಂಡು ಮಕ್ಕಳು, ಸೊಸೆಯಂದಿರೂ, ನಾಲ್ಕು ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಾಂಧವರನ್ನು ಅಗಲಿದ್ದಾರೆ, ಸಾವಿನಲ್ಲೂ ಸಾರ್ಥಕತೆ ಮೆರೆದ ಅವರು ನಿಧನಾ ನಂತರ ಅವರ ನೇತ್ರಗಳನ್ನು ದಾನ ಮಾಡಿ ಚಿರಂಜೀವಿಯಾಗಿದ್ದಾರೆ.


ಮೃತರ ಸಾವಿಗೆ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ, ಶಿವರಾಮೇಗೌಡ ನಾಗವಾರ, ಎಲ್ಲೇಗೌಡ ಬೆಸಗರಹಳ್ಳಿ, ಚಿಕ್ಕನದೊಡ್ಡಿ ಜಯರಾಮು ಶಾರದಾ ನಾಗೇಶ್ ಸೇರಿದಂತೆ ತಾಲ್ಲೂಕಿನ ಹಿರಿಯರು ಸಂತಾಪ ಸೂಚಿಸಿದ್ದಾರೆ


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑