Tel: 7676775624 | Mail: info@yellowandred.in

Language: EN KAN

    Follow us :


ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ

Posted Date: 17 Apr, 2019

ಮಹಾವೀರ ಜಯಂತಿ ಪ್ರಯುಕ್ತ ಅನ್ನದಾನ

ಅಹಿಂಸಾ ಪರಮೋಧರ್ಮ ಎಂದು ಸಾರಿದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ ಜಯಂತಿಯ ಪ್ರಯುಕ್ತ ಚನ್ನಪಟ್ಟಣ ಜೈನ್ ಸಂಘದವರು ಇಂದು ನಗರದ ನಗರಸಭಾ ಆವರಣದಲ್ಲಿ ಅನ್ನದಾನ ಏರ್ಪಡಿಸಿದ್ದರು.


ಹಿನ್ನೆಲೆ;

ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವ, ಶಿಷ್ಯರಾದ ಮಹಾವೀರ ತೀರ್ಥಂಕರರು ಹಾಗೂ ನಂತರದ ದಿಗಂಬರ ಮತ್ತು ಶ್ವೇತಾಂಬರರು ಸಹ ತಮ್ಮ ಆಶಯಗಳಾದ ಸರ್ವದಾ ತ್ಯಾಗ, ವೈರಾಗ್ಯ ಮತ್ತು ತಪಸ್ಸು ಗಳಿಗೆ ಮಹತ್ವ ನೀಡಿದ ತೀರ್ಥಂಕರರಾಗಿದ್ದರು.


ಕ್ರಿಸ್ತ ಪೂರ್ವ ೮ ನೇ ಶತಮಾನದ ೫೯೯-೫೨೭ ಬಿಹಾರದ ವೈಶಾಲಿ ನಗರದ ಬಳಿಯ ಕುಂಡಲಾ ಗ್ರಾಮದಲ್ಲಿ ಸಿದ್ಧಾರ್ಥ ಮತ್ತು ತ್ರಿಶಲಾ (ಪ್ರಿಯಕಾರಿಣಿ) ದಂಪತಿಗಳ ಮಗನಾಗಿ ಜನಿಸಿದ ಮಹಾವೀರರು ಮೂವತ್ತು ವರ್ಷಗಳ ಕಾಲ ದೇಶ ಸಂಚಾರ ಮಾಡಿ, ಸುಧೀರ್ಘ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಇಪ್ಪತ್ನಾಲ್ಕನೇ ತೀರ್ಥಂಕರರಾಗಿ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಗಳಂತಹ ತ್ಯಾಗವೇ ಜೈನಧರ್ಮವಾಗಿ ರೂಪುಗೊಂಡಿವೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.


ತ್ಯಾಗವೇ ಜೈನಧರ್ಮ ಎಂದರಿತಿರುವ ತಾಲ್ಲೂಕಿನ ಜೈನಸಂಘದ ಪದಾಧಿಕಾರಿಗಳಾದ ಕಿಸ್ತೂರ್ ಚಂದ್, ಅಜಿತ್ ಭೌರತ್, ವಿಜಯಕುಮಾರ್ ಗುಲೇಚಾ, ಅನಿಲ್ ಕೊಠಾರಿ, ವಿವೇಕ ಗೆಳದ ಮತ್ತು ವಿಶೇಷವಾಗಿ ಶಶಿಗೌಡ, ಬಾಲಾಜಿ ಜಾಧವ್, ಶಫೀರ್ ಹಾಗೂ ಜೈನ್ ಸಂಘದ ಪದಾಧಿಕಾರಿಗಳು ಅನ್ನದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑