Tel: 7676775624 | Mail: info@yellowandred.in

Language: EN KAN

    Follow us :


ಸಾಧನೆ ಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ ಪ್ರೊ ಕೃಷ್ಣೇಗೌಡ

Posted Date: 10 May, 2019

ಸಾಧನೆ ಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ ಪ್ರೊ ಕೃಷ್ಣೇಗೌಡ

ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಗುರುವಿನ ಮಾರ್ಗದರ್ಶನ ಇರಬೇಕು, ಗುರಿ ಮುಟ್ಟುವ ಛಲ ಇರಬೇಕೆ ಹೊರತು ಮುಖದ ಅಂದ ಚಂದ, ದೇಹದ ಸೌಂದರ್ಯ ಮುಖ್ಯವಾಗುವುದಿಲ್ಲ ಎಂದು ವಾಗ್ಮಿ ಪ್ರೊ ಕೃಷ್ಣೇಗೌಡ ಹೇಳಿದರು.

ಅವರು ಆದಿಚುಂಚನಗಿರಿ ಮಹಾಸಂಸ್ಥಾನ ದ ರಾಮನಗರ ಶಾಖಾ ಮಠದಲ್ಲಿ ಆಯೋಜನೆಗೊಂಡಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಕುರಿತು ಮಾತನಾಡಿದರು.


ಸನ್ಯಾಸಿಗಳು ಎಂದರೆ ಮೃದು ಸ್ವಭಾವದವರು ಎಂದರ್ಥ, ಮೃದು ಸ್ವಭಾವ ಎಂದಾಕ್ಷಣ ಅವರು ಶಕ್ತಿ ಹೀನರು ಎಂದು ತಿಳಿದುಕೊಳ್ಳುವುದು ಮೂರ್ಖತನ, ಅವರು ಬೌದ್ದಿಕವಾಗಿ ಬಹಳ ಶಕ್ತಿವಂತರು, ಗಟ್ಟಿತನದ ಶಕ್ತಿವಂತರಿಗಿಂತಲೂ ಕಠಿಣವಾದವರು ಎಂದು ಸನ್ಯಾಸತ್ವ ಸ್ವೀಕರಿಸಿದ ವಟುಗಳ ಬಗ್ಗೆ ಧೀರ್ಘವಾಗಿ ಮಾತನಾಡಿದರು.


ಅನೇಕವೇಳೆ ನಾವು ಬಾಹ್ಯ ಸೌಂದರ್ಯಕ್ಕೆ ಮರುಳಾಗುತ್ತೇವೆ, ಶೇಕಡಾವಾರು ಸಾಧನೆ ಗೈದವರು ಕುರೂಪಿಗಳು, ವಿಕಲಚೇತನರು, ಬುದ್ಧಿಮಾಂದ್ಯರು ಸೇರಿದಂತೆ ಅಂದಚಂದವಿಲ್ಲದ ಕಪ್ಪು ವರ್ಣದವರೇ ಹೆಚ್ಚು, ಸಾಲುಮರದ ತಿಮ್ಮಕ್ಕ ಸಹ ದೇಶದ ನೂರು ಸಾಧಕರಲ್ಲಿ ಒಬ್ಬರು ಎಂದು ಶಿಬಿರಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.


ರಾಮನಗರ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರು ಮಾತನಾಡಿ ಶಿಬಿರದಲ್ಲಿ ಭಾಗವಹಿಸುವುದು ಮುಖ್ಯವಲ್ಲ, ಇಲ್ಲಿ ಕಲಿತ ವಿದ್ಯೆಗಳನ್ನು, ಗಣ್ಯರು ಮತ್ತು ಸ್ವಾಮೀಜಿ ಗಳಿಂದ ಕೇಳಿದ ಉಪನ್ಯಾಸಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಉಪಯೋಗಿಸಿಕೊಂಡರೆ ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಶಿಬಿರದ ಮಕ್ಕಳಿಗೆ ತಿಳಿಸಿ ಕೊಟ್ಟರು.


ಚಿತ್ರ ನಟಿ ಅಮೂಲ್ಯ ಮಾತನಾಡಿ ನಮ್ಮ ಜೀವನ ನೀರ ಮೇಲಣ ಗುಳ್ಳೆ ಇದ್ದಂತೆ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ಎಂಬ ಗೀತೆಯಂತೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿತು ಜೀವನ ಸಾಗಿಸಬೇಕೆಂದು ಶಿಬಿರದ ಮಕ್ಕಳಿಗೆ ಕರೆ ನೀಡಿದರು.


ಜೀವನ ಒಂದಕ್ಕೊಂದು ಪೂರಕವಾಗಿರಬೇಕೆ ವಿನಹ ತದ್ವಿರುದ್ಧವಾಗಿ ಇರಬಾರದು, ಸಿಡಿಮಿಡಿಯ ಮಾವ, ಮಡಿ ಮುಡಿಯ ಅತ್ತೆ, ಅರಚಾಡುವ ಗಂಡ, ಕಿರುಚಾಡುವ ಮಕ್ಕಳು, ಮನೆಯ ಹೆಸರು ಮಾತ್ರ ಪ್ರಶಾಂತ ನಿಲಯ ಎಂಬಂತೆ ಆದರೆ ಜೀವನದಲ್ಲಿ ದೂರ ಸಾಗುವುದು ಕಷ್ಟದ ಕೆಲಸ.

ಚಂದವಿರುವವರನ್ನು ನೋಡಿ ನಾ ಚಂದವಿಲ್ಲ ಎಂದುಕೊಳ್ಳದೆ ಶಾಶ್ವತ ಸಾಧನೆಯ ಮಾಡಿ ಚಂದದ ಹೆಸರು ಸಂಪಾದಿಸಬೇಕು, ಅತ್ತು ಹಗುರವಾಗುವುದು ಒಂದು ಭಾಗವಾದರೆ, ದುಃಖವನ್ನು ತಡೆದು ಬರುವ ಕಣ್ಣೀರನ್ನು ತಡೆ ಹಿಡಿದರೆ ಹೆಚ್ಚು ಶಕ್ತಿವಂತರಾಗುತ್ತೀರಿ ಎಂದು ಸತಿ ಸಾವಿತ್ರಿ ಯ ಕಥೆ ಹೇಳುವ ಮೂಲಕ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿಗಳು ಶಿಬಿರಾರ್ಥಿಗಳಿಗೆ ಆಶೀರ್ವಚನ ನೀಡಿದರು.


ಶಿಬಿರದ ನಿರ್ದೇಶಕ ನರಸಿಂಹಯ್ಯ ನವರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು.

ಶಿಬಿರದ ಹಲವಾರು ಮಕ್ಕಳು ತಮ್ಮ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಸಮಾರೋಪ ಸಮಾರಂಭಕ್ಕೂ ಮೊದಲು ಎಲ್ಲಾ ಸ್ವಾಮೀಜಿಗಳು ಮತ್ತು ಶಿಬಿರದ ಆಯೋಜಕರು ಜಾನಪದ ಲೋಕದಲ್ಲಿ ಶಿಬಿರಾರ್ಥಿಗಳ ಜೊತೆ ಪೋಟೋ ತೆಗೆದುಕೊಳ್ಳಲಾಯಿತು.


ವೇದಿಕೆಯಲ್ಲಿ ಶಿಬಿರದ ಉಸ್ತುವಾರಿ ವಹಿಸಿದ್ದ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ದಸರೀಘಟ್ಟ ಶಾಖಾ ಮಠದ ಚಂದ್ರನಾಥ ಸ್ವಾಮೀಜಿ, ಚುಂಚನಕಟ್ಟೆ ಶಾಖಾ ಮಠದ ಶಿವಾನಂದನಾಥ ಸ್ವಾಮೀಜಿ, ಆದಿಹಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಮತ್ತು ಕೀರ್ತಿನಾಥ ಸ್ವಾಮೀಜಿ ಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑