Tel: 7676775624 | Mail: info@yellowandred.in

Language: EN KAN

    Follow us :


ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

Posted Date: 14 May, 2019

ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಚನ್ನಪಟ್ಟಣ: ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇಂದು ವಂದಾರಗುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಚುನಾವಣೆ ನಡೆದು ಒಟ್ಟು ಹನ್ನೊಂದು ಮಂದಿ ಆಯ್ಕೆಯಾದರು.


ಒಟ್ಟು ಹದಿನೆಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಸಾಲಗಾರರಲ್ಲದ ಕ್ಷೇತ್ರದಲ್ಲಿ ೬೦೦ ಮತಗಳು ಮತ್ತು ಸಾಲಗಾರರ ಕ್ಷೇತ್ರದಲ್ಲಿ ೭೪೧ ಮತದಾರರ ಜೊತೆಗೆ ಪ್ರಪ್ರಥಮ ಬಾರಿಗೆ ಸ್ತ್ರೀಶಕ್ತಿ ಸಂಘದ ೧೮೦ ಸದಸ್ಯರಿಗೆ ಮತದಾನ ಮಾಡುವ ಹಕ್ಕನ್ನು ನೀಡಲಾಗಿತ್ತು.


ಸಾಮಾನ್ಯ ಕ್ಷೇತ್ರದಲ್ಲಿ ಒಂದು ಮತ್ತು ಪ್ರವರ್ಗ ಬಿ ಒಂದು ಸ್ಥಾನ ಲಾಟರಿ ಮೂಲಕ ಅವಿರೋಧ ಆಯ್ಕೆಯಾದರೆ ನಾಮಿನಿ ಸದಸ್ಯರಾಗಿ ಒಂದು ಸ್ಥಾನ ಮೀಸಲಾಗಿತ್ತು. ಉಳಿದ ಒಂಭತ್ತು ಸದಸ್ಯರಿಗಾಗಿ ಇಂದು ಚುನಾವಣೆ ನಡೆಯಿತು, ಪ್ರಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿದ್ದರಿಂದ ಸಾಲಗಾರರ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿತ್ತು.


ಸಾಲಗಾರರಲ್ಲದ ಕ್ಷೇತ್ರದಿಂದ ದೇವರಹೊಸಹಳ್ಳಿಯ ಶ್ರೀಕಂಠ, ಸಾಲಗಾರರ ಕ್ಷೇತ್ರದಿಂದ ದೇವರಹೊಸಹಳ್ಳಿ ಸಿದ್ದರಾಮಯ್ಯ, ಮತ್ತು ಶ್ರೀನಿವಾಸ, ವಂದಾರಗುಪ್ಪೆಯ ವಿ ಬಿ ಚಂದ್ರು, ಮತ್ತು ವಿ ಎನ್ ದೇವಯ್ಯ ಹಾಗೂ ಗೊಲ್ಲಹಳ್ಳಿದೊಡ್ಡಿ ಗ್ರಾಮದ ಅನಿಲ್ ಆಯ್ಕೆಯಾದರೇ ಮಹಿಳಾ ಮೀಸಲಾತಿ ಅಡಿಯಲ್ಲಿ ಕನ್ಗಮಂಗಲ ಗ್ರಾಮದ ಗೌರಮ್ಮ ಮತ್ತು ವಂದಾರಗುಪ್ಪೆ ಗ್ರಾಮದ ಸುಧಾ, ಹಿಂದುಳಿದ ಎ ಪ್ರವರ್ಗದಲ್ಲಿ ಪೌಳಿದೊಡ್ಡಿ ಗ್ರಾಮದ ಚಿಕ್ಕತಾಯಮ್ಮ, ಹಿಂದುಳಿದ ಬಿ ಪ್ರವರ್ಗ ದಿಂದ ವಂದಾರಗುಪ್ಪೆ ಗ್ರಾಮದ ರಾಮಮೂರ್ತಿ ಆಯ್ಕೆಯಾದರು.


ಚುನಾವಣಾ ಅಧಿಕಾರಿಯಾಗಿ ಪದ್ಮನಾಭ ರವರು ಕಾರ್ಯನಿರ್ವಹಿಸಿದರು, ಮತದಾರರು, ಪಕ್ಷದ ಮುಖಂಡರು ಸೇರಿದಂತೆ ಅನೇಕ ಸಾರ್ವಜನಿಕರು ನೆರೆದಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑