Tel: 7676775624 | Mail: info@yellowandred.in

Language: EN KAN

    Follow us :


ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ

Posted Date: 17 May, 2019

ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಪುಟ್ಟಲಕ್ಷ್ಮಮ್ಮ ಆಯ್ಕೆ

ಹಿಂದಿನ ಅಧ್ಯಕ್ಷರಾದ ದೇವರಾಜು ಮರಣಾನಂತರ ತೆರವಾಗಿದ್ದ ಹೊಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಗೋವಿಂದೇಗೌಡನದೊಡ್ಡಿ ಗ್ರಾಮದ ಪಂಚಾಯತಿ ಸದಸ್ಯೆ ಶ್ರೀಮತಿ ಪುಟ್ಟಲಕ್ಷ್ಮಮ್ಮ ನವರು  ಆಯ್ಕೆಯಾದರು.


ಹದಿನೆಂಟು ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸುಶೀಲಮ್ಮ ಮತ್ತು ಪುಟ್ಟಲಕ್ಷ್ಮಮ್ಮ ನವರು ನಾಮಪತ್ರ ಸಲ್ಲಿಸಿದ್ದು ಸುಶೀಲಮ್ಮ ಎಂಟು ಮತಗಳನ್ನು ಪಡೆದು ಪರಾಜಿತರಾದರೆ ಹತ್ತು ಮತಗಳನ್ನು ಪಡೆದ ಪುಟ್ಟಲಕ್ಷ್ಮಮ್ಮ ನವರು ವಿಜೇತರಾದರು.


ಚುನಾವಣಾ ಅಧಿಕಾರಿಯಾಗಿ ಕಾವೇರಿ ನಿಗಮದ ಇಂಜಿನಿಯರ್ ವೆಂಕಟೇಗೌಡರು ಕಾರ್ಯನಿರ್ವಹಿಸಿದರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭಾಗ್ಯಲಕ್ಷ್ಮಮ್ಮ, ಮುಖಂಡ ಬೋರ್ ವೆಲ್ ರಂಗನಾಥ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑