Tel: 7676775624 | Mail: info@yellowandred.in

Language: EN KAN

    Follow us :


ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು !?

Posted Date: 22 May, 2019

ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು !?

(ಸಾಮಾನ್ಯ ಜನರ ನಾಡಿಮಿಡಿತ)

ಹಲವಾರು ಸಮೀಕ್ಷೆಗಳು ಸಾಮಾನ್ಯ ಮತದಾರರನ್ನು ಸಂಪೂರ್ಣ ಗಣನೆಗೆ ತೆಗೆದುಕೊಳ್ಳದೆ ನಾಮಕಾವಸ್ಥೆಗಷ್ಟೇ ಸೀಮಿತಗೊಳಿಸಿದ್ದು ಕೇವಲ ಒಂದು, ಎರಡು, ಮೂರನೇ ದರ್ಜೆಯ ಆಯಾಯ ಪಕ್ಷದ ನಾಯಕರು ಮತ್ತು ಹಿಂಬಾಲಕರನ್ನಷ್ಟೇ ಸಂದರ್ಶಿಸಿ ಇಂತಹವರೇ ಗೆಲ್ಲುತ್ತಾರೆ ಎಂದು ಘೋಷಿಸಿದ್ದಾರೆ.


ನಮ್ಮ ಪತ್ರಿಕೆಯ ವರದಿಗಾರರು ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಹುತೇಕ ಎಲ್ಲಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಿರುಗಾಡಿ ಸಾಮಾನ್ಯರಲ್ಲಿ ಸಾಮಾನ್ಯರು ಎನಿಸಿಕೊಂಡ ಕಟ್ಟ ಕಡೆಯ ಮತದಾರರನ್ನು ಸಂದರ್ಶಿಸಿದಾಗ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಶ್ವಥ್ ನಾರಾಯಣ ರವರು ಗೆಲ್ಲುವ ಸಾಧ್ಯತೆ ಇದೆ ಎಂಬ ವರದಿಯನ್ನು ಅಲ್ಲಗಳೆಯುವಂತಿಲ್ಲ.


ಮಂಡ್ಯ ಕ್ಷೇತ್ರದಲ್ಲಿ ಶೇ ೮೦ ರಷ್ಟು ಅಂಬಿ ಅಭಿಮಾನಿಗಳು, ಹದಿನೆಂಟರಿಂದ ಮೂವತ್ತು ವರ್ಷದೊಳಗಿನ ದರ್ಶನ್ ಮತ್ತು ಯಶ್ ಅಭಿಮಾನಿಗಳು, ಶೇ ೬೦ ರೈತ ಸಂಘದ ಸದಸ್ಯರು, ಸಂಪೂರ್ಣ ಬಿಜೆಪಿ ಮತದಾರರು, ಹಿಂದೂ ಮತ್ತು ಹಿಂದೂ ದೇಶ ಭಕ್ತರು, ಬಹುತೇಕ ಸ್ತ್ರೀಯರು ಸೇರಿದಂತೆ ಎಲ್ಲರೂ ಪಕ್ಷೇತರ ಅಭ್ಯರ್ಥಿ ಸುಮಲತಾ ರವರಿಗೆ ಮತ ಚಲಾಯಿಸುರುವುದಾಗಿ ಆಣೆ ಭಾಷೆಯೊಂದಿಗೆ ಕರಾರುವಾಕ್ಕಾಗಿ ಹೇಳುತ್ತಾರೆ.


ಬಹಳ ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಮೂಲ ಮತದಾರರು ಮತ್ತು ಸ್ಥಳೀಯ ಮುಖಂಡರು ಕಾಂಗ್ರೆಸ್ ನ ಹಿರಿಯ ನಾಯಕರ ಮಾತಿಗೆ ಕಿಂಚಿತ್ತೂ ಬೆಲೆ ಕೊಡದೆ ಸುಮಲತಾ ರವರಿಗೆ ಬೆಂಬಲ ಕೊಟ್ಟಿದ್ದು ಒಂದೆಡೆಯಾದರೇ, ಜೆಡಿಎಸ್ ಪಕ್ಷದ ಒಂದು ಮತ್ತು ಎರಡನೇ ದರ್ಜೆಯ ನಾಯಕರು ಒಳ ಏಟು ನೀಡಿದ್ದಾರೆ ಎಂಬ ಗುಸುಗುಸು ಎದ್ದಿದೆ, ಇದಕ್ಕೆ ಸ್ಪಷ್ಟ ಕಾರಣ ಹುಡುಕುತ್ತಾ ಹೋದಾಗ ಇದು ಸತ್ಯ ಎಂಬುದು ಗೊತ್ತಾಯಿತು.

ಮಾಜಿ, ಹಾಲಿ ಮತ್ತು ಭವಿಷ್ಯದ ಜೆಡಿಎಸ್ ನಾಯಕರುಗಳು ಮೇಲ್ನೋಟಕ್ಕೆ ಜೆಡಿಎಸ್ ಪರವಾಗಿದ್ದು ಒಳಗೊಳಗೆ ಪಕ್ಷೇತರ ಅಭ್ಯರ್ಥಿ ಗೆ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತವೆ, ಕಾರಣ ನಿಖಿಲ್ ಕುಮಾರಸ್ವಾಮಿ ಯನ್ನು ಗೆಲ್ಲಿಸಿದರೇ ನಮಗಿನ್ನೂ ಉಳಿಗಾಲವಿಲ್ಲ, ಪ್ರತಿಯೊಂದಕ್ಕೂ ಆ ಹುಡುಗನ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಬರುತ್ತದೆ ಎಂಬ ದೂರಾಲೋಚನೆ ಇದೆಯಂತೆ.


ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ಗೆಲುವು ಶತಸಿದ್ದ ಎಂದು ಎಲ್ಲರೂ ಉದ್ಗರಿಸಿದ್ದಾರೆ, ಅವರು ಎಂದು ಸಣ್ಣತನದ ರಾಜಕೀಯ ಮಾಡಿದವರಲ್ಲ, ನರೇಗಾ ಯೋಜನೆಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡಿಸಿ ಸೈ ಎನಿಸಿಕೊಂಡಿದ್ದಾರೆ, ಯಾವ ಕೆಲಸಕ್ಕೆ ಕೈ ಹಾಕಿದರೂ ಪಟ್ಟು ಬಿಡದೆ ಮಾಡಿಸುವ ಛಲ ಅವರಲ್ಲಿದೆ, ಈ ಬಾರಿ ಮೇಕೆದಾಟು ಸೇರಿದಂತೆ ಅನೇಕ ಕೆಲಸಗಳ ರೂಪುರೇಷೆಯಲ್ಲಿ ಅವರು ತೊಡಗಿದ್ದಾರೆ ಹಾಗಾಗಿ ಅವರು ಗೆಲ್ಲಬೇಕು, ಗೆಲ್ಲುತ್ತಾರೆ ಎಂದೇ ಭಾವಿಸಬಹುದು.


ಆದರೆ ರಾಷ್ಟ್ರಭಕ್ತಿ, ಮೋದಿ, ಹಿಂದೂ, (ಅತಿ ಬುದ್ದೀಜೀವಿಗಳನ್ನು ಹೊರತುಪಡಿಸಿ) ವಿದ್ಯಾವಂತರು, ಬುದ್ದಿಜೀವಿಗಳು, ಬಹಳ ಮುಖ್ಯವಾಗಿ ಯುವ ಜನತೆ ಯಾವ ಆಮಿಷಕ್ಕೂ ಒಳಗಾಗದೇ ಬಿಜೆಪಿ ಪರ ಮತ ಚಲಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ.


ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ರವರು ಅಂತಹ ಪರಿಚಿತರೇನಲ್ಲ, ಬಿಜೆಪಿ ಪಕ್ಷದಲ್ಲಿ ಸಿ ಪಿ ಯೋಗೇಶ್ವರ್ ಇದ್ದರೂ ಸಹ ಅವರು ಸಕ್ರಿಯವಾಗಿ ತೊಡಗಿಸಿಕೊಂಡವರಲ್ಲ, ಅಶ್ವಥ್ ನಾರಾಯಣ ಮತ್ತು ಮುಖಂಡರು ಬಂದಾಗ ಮತ್ತು ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಗಿದ್ದರು, ನಾಯಕರನ್ನು ಹೊರತುಪಡಿಸಿ (ಕನಕಪುರ ಬಿಟ್ಟು) ಚಲಾವಣೆಗೊಂಡ ಮತಗಳಲ್ಲಿ ಶೇಕಡಾ ೫೫ ರಿಂದ ೬೦ ರಷ್ಟು ಮತಗಳು ಬಿಜೆಪಿ ಪಕ್ಷದ ಗುರುತಿಗೆ ಚಲಾವಣೆಗೊಂಡಿರುವುದಾಗಿ ಆಂತರಿಕ ವರದಿಗಳು ತಿಳಿಸುತ್ತವೆ.


*ಜನಸಾಮಾನ್ಯರ ನಾಡಿಮಿಡಿತದ ಉಲ್ಟಾ ಆದರೆ ಕೊನೆಯ ದಿನದ ಕರಾಮತ್ತು ಕೆಲಸ ಮಾಡಿದೆ ಎಂದು ಸಾಬೀತಾಗುತ್ತದೆ ಎಂದು ಹಲವರ ಅಂಬೋಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑