Tel: 7676775624 | Mail: info@yellowandred.in

Language: EN KAN

    Follow us :


ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಂದ ಶುಲ್ಕ ವಸೂಲಿ ಪೋಷಕರು ದೂರು ನೀಡಲು ಕರೆ

Posted Date: 27 May, 2019

ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಮಕ್ಕಳಿಂದ ಶುಲ್ಕ ವಸೂಲಿ ಪೋಷಕರು ದೂರು ನೀಡಲು ಕರೆ

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಆರ್ ಟಿ ಇ ಮಕ್ಕಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಬಾದಾಮಿ ತಾಲ್ಲೂಕಿನಲ್ಲಿ ದಾವೆ ಹೂಡಿರುವುದರಿಂದ ಎಚ್ಚೆತ್ತ ಸರ್ಕಾರ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಈ ಕೆಳಕಂಡ ದಿನಾಂಕದಂದು ಮಂಡ್ಯ ಡಯಟ್ ಪ್ರಾಂಶುಪಾಲರ ನೇತೃತ್ವದಲ್ಲಿ ದೂರು ಸ್ವೀಕರಿಸಲಾಗುವುದು ಎಂದು ರಾಮನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


೧) ಚನ್ನಪಟ್ಟಣ ೨೮/೦೫/೧೯ ಮಂಗಳವಾರ ಬೆಳಿಗ್ಗೆ ೧೦:೦೦ ಗಂಟೆ.

೨) ರಾಮನಗರ ಬೆಳಿಗ್ಗೆ ೩೧/೦೫/೧೯ ಶುಕ್ರವಾರ ೧೦:೦೦ ಗಂಟೆ.

೩) ಮಾಗಡಿ ೦೧/೦೬/೧೯ ಶನಿವಾರ ಬೆಳಿಗ್ಗೆ ೧೦:೦೦ ಗಂಟೆ.

೪) ಕನಕಪುರ ೦೧/೦೬/೧೯ ಶನಿವಾರ ಮಧ್ಯಾಹ್ನ ೦೩:೦೦ ಗಂಟೆ ಗೆ ಆಯಾಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಅಥವಾ ಗುರುಭವನದಲ್ಲಿ ಆಯೋಜಿಸಲಾಗುತ್ತದೆ.


*ಚನ್ನಪಟ್ಟಣದಲ್ಲಿ ನಾಳೆ ೨೮/೦೫/೧೯ ರ ಮಂಗಳವಾರ ಬೆಳಿಗ್ಗೆ ೧೦:೦೦ ಗುರುಭವನ ದಲ್ಲಿ ಡಯಟ್ ಪ್ರಾಂಶುಪಾಲರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ದೂರು ಸ್ವೀಕರಿಸಲಾಗುವುದು, ಹೆಚ್ಚುವರಿ ಶುಲ್ಕ ನೀಡಿರುವ ಆರ್ ಟಿ ಇ ಮಕ್ಕಳ ಪೋಷಕರು ದೂರು ನೀಡಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑