Tel: 7676775624 | Mail: info@yellowandred.in

Language: EN KAN

    Follow us :


ಏಕಮುಖಿ ನೋಂದಣಿ ಮಾಡಿ ಚುನಾವಣೆ ಹುನ್ನಾರ, ಚುನಾವಣೆ ಮುಂದೂಡುವಂತೆ ಮನವಿ

Posted Date: 30 May, 2019

ಏಕಮುಖಿ ನೋಂದಣಿ ಮಾಡಿ ಚುನಾವಣೆ ಹುನ್ನಾರ, ಚುನಾವಣೆ ಮುಂದೂಡುವಂತೆ ಮನವಿ

ಚನ್ನಪಟ್ಟಣ: ಪ್ರೌಢಶಾಲಾ ಶಿಕ್ಷಕರ ಸಂಘಕ್ಕೆ ಜೂನ್ ೧೩ ರಂದು ಚುನಾವಣೆ ನಡೆಯಲಿದ್ದು ತಾಲ್ಲೂಕಿನಾದ್ಯಂತ ೨೨೫ ಮಂದಿ ಪ್ರೌಢಶಾಲಾ ಶಿಕ್ಷಕರಿದ್ದು ಎಲ್ಲಾ ಶಿಕ್ಷಕರ ಗಮನಕ್ಕೆ ತರದೆ ಯಾರೋ ಒಬ್ಬರ ಇಚ್ಚೆಯಂತೆ ಕೇವಲ ೮೮ ಮಂದಿಗೆ ಮಾತ್ರ ನೋಂದಣಿ ಮಾಡಿಸಿ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ, ಎಲ್ಲರನ್ನೂ ನೋಂದಣಿ ಮಾಡಿಸುವ ತನಕ ಚುನಾವಣೆಯನ್ನು ಮುಂದೂಡಬೇಕೆಂದು ಸೆಕೆಂಡರಿ ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಅಧ್ಯಕ್ಷ ಜಿ ಕೆ ರಂಗನಾಥ ಆಗ್ರಹಿಸಿದರು.

ಅವರು ಇಂದು ಸಂಜೆ ನಗರದ ಗುರುಕೃಪಾ ವಾಣಿಜ್ಯ ಸಂಕೀರ್ಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವಾಗಿ ಮಾತನಾಡಿದರು.


ಒಂದೇ ಶಾಲೆಯಲ್ಲಿ ಇರುವ ಎಲ್ಲಾ ಶಿಕ್ಷಕರಿಗೆ ತಿಳಿಯದಂತೆ ಅವರಿಗೆ ಬೇಕಾದವರಿಗೆ ಮಾತ್ರ ನೋಂದಣಿ ಮಾಡಿಸಿ ಇನ್ನಿತರ ಶಿಕ್ಷಕರಿಗೆ ಯಾವ ಉದ್ದೇಶದಿಂದ ನೋಂದಣಿ ಮಾಡಿಸದೇ ಬಿಟ್ಡಿದ್ದಾರೆ ಎಂಬುದನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ತಿಳಿಸಬೇಕು ಎಂದರು.


ನೋಂದಣಿಗೆ ಪೆಬ್ರವರಿ ೨೯ ಕೊನೆ ದಿನಾಂಕ ಆಗಿದ್ದು ಎಲ್ಲರಿಗೂ ಮಾಹಿತಿಯನ್ನು ತಲುಪಿಸದೇ ಯಾರೋ ಒಬ್ಬರ ಇಷ್ಟಾನುಸಾರವಾಗಿ ನೋಂದಣಿ ಮಾಡಿಸಿರುವುದು ಸ್ಪಷ್ಟವಾಗಿದ್ದು, ಅನ್ಯಾಯ ಆಗಿರುವ ಶಿಕ್ಷಕರಿಗೂ ನೋಂದಣಿ ಮಾಡಿಸಿ ಚುನಾವಣೆ ನಡೆಸಬೇಕು, ನೋಂದಣಿ ಆಗುವ ತನಕ ಚುನಾವಣೆ ಮುಂದೂಡಬೇಕೆಂದು ಮತ್ತೊಮ್ಮೆ ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿ ಮಂಜುನಾಥ, ತಗಚಗೆರೆ ಪ್ರೌಢಶಾಲೆ ಶಿಕ್ಷಕಿ ಸಾವಿತ್ರಮ್ಮ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑