Tel: 7676775624 | Mail: info@yellowandred.in

Language: EN KAN

    Follow us :


ಅನೈತಿಕ ಸಂಬಂಧ ಮನನೊಂದು ದಂಪತಿ ಆತ್ಮಹತ್ಯೆ, ಉದ್ರಿಕ್ತರಿಂದ ಬೆಂಕಿ

Posted Date: 11 Jun, 2019

ಚನ್ನಪಟ್ಟಣ: ತಾಲ್ಲೂಕಿನ ಸಾದಾರಹಳ್ಳಿ ದಾಖ್ಲೆ  ಶ್ರೀನಿವಾಸಪುರ ಗ್ರಾಮದಲ್ಲಿ ದೇವಾಲಯದ

ಅರ್ಚಕನೊಬ್ಬನ ಅನೈತಿಕ ಸಂಬಂಧದಿಂದ ಗಂಡಹೆಂಡತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರ್ಚಕ ತ್ಯಾಗರಾಜ ಮನೆ ಹಾಗು ಮನೆಯ ಮುಂದೆ ನಿಂತಿದ್ದ ಅವರ ಕಾರಿಗೆ ಬೆಂಕಿಹಚ್ಚಿರುವ ಘಟನೆ ಮಂಗಳವಾರ ಸಂಜೆ  ಗ್ರಾಮದಲ್ಲಿ ನಡೆದಿದೆ.


ಗ್ರಾಮದ ಲೋಕೇಶ್(೩೩), ಕೌಸಲ್ಯ(೨೪) ಆತ್ಮಹತ್ಯೆಗೆ ಶರಣಾದ ದಂಪತಿಗಳು. ಗ್ರಾಮದ ಮುತ್ಯಾಲ ಮಾರಮ್ಮ ದೇವಸ್ಥಾನದ ಅರ್ಚಕ ತ್ಯಾಗರಾಜು ಎಂಬ ವ್ಯಕ್ತಿಯ ಚೆಲ್ಲಾಟದಿಂದ ನೊಂದ ದಂಪತಿಗಳು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ಸಂಬಂಧಿಕರು ಮನೆಯ ಮುಂದೆ ಗಲಾಟೆ ನಡೆಸಿ ಬೆಂಕಿ ಹಚ್ಚಿದ್ದಾರೆ. ಬೆಂಕಿಯಲ್ಲಿ ಅರ್ಚಕನಿಗೆ ಸೇರಿದ ಇನ್ನೋವಾ ಮತ್ತು ಮಾರುತಿ ಆಮ್ನಿ ಕಾರು, ಬೈಕು ಸೇರಿದಂತೆ ಮನೆಗೆ ಹಾನಿಯಾಗಿದೆ. ಈ ವೇಳೆ ಪಕ್ಕದಲ್ಲೇ ಇದ್ದ ದೇವಾಲಯ ಮತ್ತು ಟ್ರ್ಯಾಕ್ಟರ್ ಸಹ ಬೆಂಕಿಗೆ ಆಹುತಿಯಾಗಿವೆ.


ಶ್ರೀನಿವಾಸಪುರ ಗ್ರಾಮದ ಲೋಕೇಶ್ ಮತ್ತು ಕೌಸಲ್ಯ ೫ ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೌಸಲ್ಯ ಮತ್ತು ಅದೇ ಗ್ರಾಮದ ಮುತ್ಯಾಲಮಾರಮ್ಮ ದೇವಿಯ ಪೂಜಾರಿ ತ್ಯಾಗರಾಜು ನಡುವೆ ಅನೈತಿಕ ಸಂಬಂಧ ಇದ್ದು, ಕಳೆದ ಒಂದು ವಾರದ ಹಿಂದೆ ಇವರಿಬ್ಬರು ಊರು ಬಿಟ್ಟು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.


ಪತ್ನಿಯನ್ನು ಹುಡುಕಿ ರಾಜಿಸಂಧಾನ ಮಾಡಿ ಕರೆತಂದಿದ್ದ ಲೋಕೇಶ್, ತ್ಯಾಗರಾಜು ಜತೆ ಇನ್ನು ಮುಂದೆ ಸಹವಾಸ ಮಾಡದಂತೆ ಪತ್ನಿಯ ಕೈಯಲ್ಲಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದ.


ಒಂದು ವಾರದ ನಂತರ ಕಾಮಪಿಶಾಚಿ ಅರ್ಚಕ ತ್ಯಾಗರಾಜ ಲೋಕೇಶ್ ಮೊಬೈಲ್‌ಗೆ ಆತನ ಪತ್ನಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಪೋಟೋ ಮತ್ತು ವಿಡಿಯೋವನ್ನು ಕಳುಹಿಸಿದ್ದಾಗಿ ತಿಳಿದು ಬಂದಿದೆ.

ಇದರಿಂದ ಮನನೊಂದ ದಂಪಂತಿಗಳು ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ದಂಪತಿಗಳು ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ತ್ಯಾಗರಾಜು ಮನೆಯ ಮುಂದೆ ಜಮಾಯಿಸಿ ಗಲಾಟೆ ನಡೆಸಿ ಬೆಂಕಿ ಹಚ್ಚಿದ್ದಾರೆ.

ತ್ಯಾಗರಾಜು ಮನೆಯಲ್ಲಿದ್ದ ತ್ಯಾಗರಾಜು ತಾಯಿ, ಅಣ್ಣ, ಮತ್ತು ಮನೆಯಲ್ಲಿದ್ದವರು ತಮ್ಮ ಮನೆಯ ಹಿಂಭಾಗದಲ್ಲಿರುವ ಇನ್ನೊಂದು ಮನೆಯಲ್ಲಿ ಅವಿತು ಕುಳಿತಿದ್ದರಿಂದ ಯಾವುದೇ ಅಪಾಯವಿಲ್ಲದೆ ಬಚಾವ್ ಆಗಿದ್ದಾರೆ.


ಇದೇ ಸಮಯದಲ್ಲಿ ಆರೋಪಿ ತ್ಯಾಗರಾಜು ಪರಾರಿಯಾಗಿದ್ದು

 ಅಕ್ಕೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಡಿವೈಎಸ್ಪಿ ಮಲ್ಲೇಶ್, ವೃತ್ತ ನಿರೀಕ್ಷಕ ಮಂಜುನಾಥ್ ಹಾಗೂ ಅಕ್ಕೂರು ಪೋಲಿಸ್ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑