Tel: 7676775624 | Mail: info@yellowandred.in

Language: EN KAN

    Follow us :


ಕೂಡಿಟ್ಟು ಪರರ ಪಾಲು ಮಾಡದೆ ಬದುಕಿದ್ದಾಗಲೆ ಸಮಾಜಕ್ಕೆ ಅರ್ಪಿಸಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

Posted Date: 23 Jun, 2019

ಕೂಡಿಟ್ಟು ಪರರ ಪಾಲು ಮಾಡದೆ ಬದುಕಿದ್ದಾಗಲೆ ಸಮಾಜಕ್ಕೆ ಅರ್ಪಿಸಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ಉಳ್ಳವರು ದಾನ ಮಾಡುವುದರ ಮೂಲಕ ಸಮಾಜದ ಏಳಿಗೆಗೆ ನೆರವಾಗಬೇಕು ಎಂದು ಶ್ರೀ ಆದಿ ಚುಂಚನಗಿರಿ ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.


ನಗರದ ಹೊರವಲಯದಲ್ಲಿರುವ ಬಿ.ಜಿ.ಎಸ್. ಅಂಧರ ಶಾಲೆಯ ಸಭಾಂಗಣದಲ್ಲಿ ಭಾನುವಾರ ಚನ್ನಪಟ್ಟಣ ಮೂಲದ *ಜಾಲಿ ಫೆಲೋಸ್ ಕಬ್ಲ್‌* ವತಿಯಿಂದ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿಯೊಬ್ಬರು ತಮ್ಮ ಗಳಿಕೆಯಲ್ಲಿ  ಒಂದಿಷ್ಟು ಭಾಗವನ್ನು ಸಮಾಜದ ಏಳಿಗೆಗೆ ಮೀಸಲಿಡಬೇಕು, 

ಕೂಡಿಟ್ಟ ಸಂಪತ್ತನ್ನು ಬದುಕಿದ್ದಾಗಲೇ ಸದ್ವಿನಿಯೋಗಿಸಬೇಕು, ಇಲ್ಲದಿದ್ದರೆ ಆ ಸಂಪತ್ತು ಕಳ್ಳರ ಪಾಲಾಗಬಹುದು, ತಾವೂ ಅನುಭವಿಸದಿದ್ದರೆ ತಮ್ಮ ಮುಂದಿನ ಪೀಳಿಗೆಯವರು ಅನುಭವಿಸುತ್ತಾರೆ, ಇದರ ಬದಲಿಗೆ ತಾವೂ ಜೀವಂತ ಇರುವಾಗಲೆ ಸಮಾಜದ 

ಸೇವೆಗೆ ತೊಡಗಿಸಿ ಜೀವನದಲ್ಲಿ ಸಂತೃಪ್ತಿಯನ್ನು ಪಟ್ಟುಕೊಳ್ಳಬೇಕು ಎಂದರು.

ಅರ್ಹರಿಗೆ ನೆರವಾಗುವುದರ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಜಾಲಿ ಫೆಲೋಸ್ ಕ್ಲಬ್ ಮುಂದಾಗಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.


ಸಾಧನೆ ಒಂದು ತಪ್ಪಸ್ಸಿದ್ದಂತೆ, ವಿಜ್ಞಾನಿಗಳು ಸಹ ತಪಸ್ವಿಗಳೇ, ಪ್ರತಿಯೊಬ್ಬರಲ್ಲೂ 

ಒಂದಲ್ಲ ಒಂದು ವಿಶೇಷ ಶಕ್ತಿ ಇರುತ್ತದೆ, ಅದನ್ನು ಗುರುತಿಸಿಕೊಂಡು ಸಾಧನೆಯ 

ಮೆಟ್ಟಿಲೇರಬೇಕು ಎಂದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 

ಯಶಸ್ವಿಯಾಗಿರುವುದು ಈ ವಿದ್ಯಾರ್ಥಿಗಳ ಸಾಧನೆ. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ 

ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಕಾರ್ಯ, ಈ ವಿದ್ಯಾರ್ಥಿಗಳ ಸಾಧನೆ ಬೇರೆ 

ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಬೇಕು ಎಂದರು.


ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ಕೆಲವು ಸಮಾನ ಮನಸ್ಕ ಸರ್ಕಾರಿ ನೌಕರರು ಸೇರಿಕೊಂಡು ರಚಿಸಿಕೊಂಡಿರುವ ಜಾಲಿ ಫೆಲೋಸ್ ಕ್ಲಬ್ ಪದಾಧಿಕಾರಿಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವುದು ಸಂತಸ ತಂದಿದೆ, ಸಾಮಾಜಿಕ ಕಾರ್ಯಕ್ಕಾಗಿ ಗಳಿಕೆಯಲ್ಲಿ 

ಸ್ಪಲ್ಪ ಹಣವನ್ನು ಮೀಸಲಿಡುವುದು ಸರಿಯಾದ ಕ್ರಮವಾಗಿದೆ, ಈ ರೀತಿಯ ಅಭಿನಂದನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಸದೇ ಇನ್ನಿತರ ಶ್ರಮಿಕ ವರ್ಗದ ಜನರನ್ನು ಗುರುತಿಸಿ ಅಭಿನಂದಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ, ಬಯಲು ಸೀಮೆ ಪತ್ರಿಕೆಯ ಸಂಪಾದಕ ಸು.ತ.ರಾಮೇಗೌಡ ಮಾತನಾಡಿ, ಅಂಧರ 

ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲೂ ಅಗಾಧ ಶಕ್ತಿ ಸಾಮರ್ಥ್ಯವಿದೆ. ಅದನ್ನು 

ಗುರುತಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಅವರ ಬಾಳಿಗೆ ಬೆಳಕು ನೀಡುವ ಕಾಯಕ ಮಾಡಿದ್ದಾರೆ, ಅದನ್ನು ಕಿರಿಯ ಸ್ವಾಮೀಜಿಗಳು ಚ್ಯುತಿ ಬರದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವುದು ಅಭಿನಂದನೀಯ, ಇಂಥ ಮಹಾನ್ ಕಾರ್ಯಕ್ಕೆ ನಮ್ಮಿಂದಾಗುವ ಸೇವೆಯನ್ನು ಒದಗಿಸುವ ಮೂಲಕ ಶ್ರೀಗಳ ಜನಪರ ಕಾರ್ಯಕ್ಕೆ 

ಬೆಂಬಲವಾಗಿ ನಿಲ್ಲಬೇಕು ಎಂದರು.


ಎಲ್ಲಾ ಅಂಗಗಳು ಚನ್ನಾಗಿರುವ ನಾವುಗಳು ಸಾಧಿಸುವುದು ದೊಡ್ಡ ಸಾಧನೆಯಲ್ಲ, ಅಂಗವೈಕಲ್ಯ ವನ್ನು ಮೆಟ್ಟಿ ನಿಂತು ನಮ್ಮಂತೆಯೇ ಸಾಧನೆ ಮಾಡುವವರು ನಿಜವಾದ ಸಾಧಕರು, ನಮ್ಮ ಅಂಧರ ಶಾಲೆಯ ಮಕ್ಕಳೇ ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ, ಅಂಧರಾದರೂ ಸಹ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ ಎಂದು ಶ್ಲಾಘಿಸಿದರು.


ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಶು ವೈದ್ಯಕೀಯ ಕ್ಷೇತ್ರದಲ್ಲಿ 

ಯುವ ವಿಜ್ಞಾನಿ ಪ್ರಶಸ್ತಿ  ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ 

ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನಿವೃತ್ತ ಲೆಕ್ಕಾಧಿಕಾರಿ ರಾಮಚಂದ್ರ, ಕ್ಲಬ್‌ನ ಪ್ರಮುಖರಾದ ಶ್ರೀನಿವಾಸ ಇತರರು ಇದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಸ್ವಾಗತಿಸಿದರು.


ಅಭಿನಂದನೆಗೆ ಭಾಜನರಾದವರು

ಡಾ.ಬಿ.ಆರ್.ಸುಮತಿ (ಪಶು ಆರೋಗ್ಯ ಮತ್ತು ಜೈವಿಕ ವಿಜ್ಞಾನದಲ್ಲಿ ಯುವ ವಿಜ್ಞಾನಿ 

ಪ್ರಶಸ್ತಿ), ಡಾ.ಎಂ.ಎಸ್.ಕಾರ್ತಿಕ್ (ವೈದ್ಯಕೀಯ ಸ್ನಾತಕೋತ್ತರ ಪದವಿ), ಶಶಿ‘ರ ಬಸವರಾಜ 

ಕೊಕಟನೂತ (ಅಂಧ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಯಲ್ಲಿ ೯೪%), ಬಿ.ಎಸ್.ತೇಜಸ್ ಗೌಡ (ಎಸ್ 

ಎಸ್ ಎಲ್ ಸಿ ಶೇ ೯೦ ಅಂಕ), ಕನಕಲಕ್ಷ್ಮಿ (ಎಸ್ ಎಸ್ ಎಲ್ ಸಿ ಯಲ್ಲಿ ಶೇ ೯೫ ಅಂಕ), 

ವೈಷ್ಣವಿ (ಪಿಯುಸಿ ವಿಜ್ಞಾನ ವಿಭಾಗ ಶೇ ೯೫ ಅಂಕ), ಪವನ್.ಕೆ.ಎಸ್. (ಪಿಯುಸಿ ಶೇ ೯೪ 

ಅಂಕ), ಜೀವನ್ ಗೌಡ.ಬಿ.ಪಿ. (ಪಿಯುಸಿ ವಿಜ್ಞಾನ ವಿಭಾಗ ಶೇ ೯೦ ಅಂಕ), ರಕ್ಷಿತಾ.ಎಂ.ಜೆ. 

(ಪಿಯುಸಿ ವಿಜ್ಙಾನ ವಿಭಾಗದಲ್ಲಿ ಶೇ ೭೦ ಅಂಕ), ಬೇಬಿ ನಿಯತಿ ವಿಜಯಕಮಾರ್ (ಪ್ರಿನ್ಸಸ್ ಆಫ್ ಮೈಸೂರು ೨೦೧೯) ಅಭಿನಂದನೆಗೆ ಪಾತ್ರರಾದ ಸಾಧಕರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑